ನವದೆಹಲಿ: ಆರೋಗ್ಯ ಸಚಿವ ಯುಟಿ ಖಾದರ್ ಕ್ರಿಯಾಶೀಲ ಸಚಿವ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶಹಬ್ಬಾಸ್ ಗಿರಿ ನೀಡಿದ್ದಾರೆ. ಅಷ್ಟೇ ಅಲ್ಲ ಯುಟಿ ಖಾದರ್ ಅವರನ್ನು ಸಂಪುಟದಲ್ಲಿ ಮುಂದುವರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಸೂಚನೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕ್ರಿಯಾಶೀಲ ಸಚಿವರನ್ನು ಸಂಪುಟದಿಂದ ಕೈಬಿಡಬಾರದು ಎಂದು ಸೋನಿಯಾ ಗಾಂಧಿ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ. ಸಚಿವ ಸಂಪುಟ ಪುನಾರಚನೆಯಲ್ಲಿ ಕೈಬಿಡಲಿರುವ ಪಟ್ಟಿಯಲ್ಲಿ ಯುಟಿ ಖಾದರ್ ಅವರ ಹೆಸರೂ ಕೂಡಾ ಇದ್ದಿತ್ತು.
ಆದರೆ ಯುಟಿ ಖಾದರ್ ತಮ್ಮ ಕ್ರಿಯಾಶೀಲತೆಯಿಂದಾಗಿ ಸಚಿವ ಸ್ಥಾನವನ್ನು ಉಳಿಸಿಕೊಂಡಂತಾಗಿದೆ…
-ಉದಯವಾಣಿ
Comments are closed.