ಕರ್ನಾಟಕ

ಬೆಲೆ ಏರಿಕೆ ವಿರುದ್ದ 5 ರೂ.ಗೆ ಮೂಲಂಗಿ ಮಾರಿ ಪ್ರತಿಭಟಿಸಿದ ವಾಟಾಳ್‌ !

Pinterest LinkedIn Tumblr

mulaಬೆಂಗಳೂರು : ಸದಾ ಒಂದಲ್ಲ ಒಂದು ವಿನೂತನ ಪ್ರತಿಭಟನೆಗಳ ಮೂಲಕ ಜನರ ಗಮನ ಸೆಳೆಯುವ ಕನ್ನಡ ಚಳುವಳಿ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್‌ ಅವರು ಶನಿವಾರ ತರಕಾರಿ ಬೆಲೆ ಏರಿಕೆ ವಿರೋಧಿಸಿ ಮೆಜೆಸ್ಟಿಕ್‌ನಲ್ಲಿ 5 ರೂಪಾಯಿಗೆ ಒಂದು ಕಟ್ಟು ಮೂಲಂಗಿ ಮಾರಾಟ ಮಾಡಿ ಸರಕಾರದ ವಿರುದ್ದ ಪ್ರತಿಭಟಿಸಿದರು.

ಬೆಂಬಲಿಗರೊಂದಿಗೆ ಕೈಗಾಡಿಯಲ್ಲಿ ಮೂಲಂಗಿಯನ್ನು ತುಂಬಿಕೊಂಡು ಬಂದ ವಾಟಾಳ್‌ ಅವರು 5ರೂಪಾಯಿ ಗೆ ಮೂಲಂಗಿ..ಮೂಲಂಗಿ…5 ರೂಪಾಯಿಗೆ ಮೂಲಂಗಿ ಅನ್ನುತ್ತಿದ್ದಂತೆ ಜನ ಮುಗಿ ಬಿದ್ದು ಮಾರುಕಟ್ಟೆಯಲ್ಲಿ 40 ರೂಪಾಯಿ ದಾಟಿರುವ ಮೂಲಂಗಿಯನ್ನು ಖರೀದಿಸಿದರು.

ಇದೇ ವೇಳೆ ವಾಟಾಳ್‌ ಅವರು ಸರಕಾರದ ವಿರುದ್ದ ಎಂದಿನಂತೆ ಕಿಡಿ ಕಾರಿ ರಾಜ್ಯಾದ್ಯಂತ ಪ್ರತಿಭಟನೆ ನಡುಸುವುದಾಗಿ ಘೋಷಣೆ ಮಾಡಿದರು.
-ಉದಯವಾಣಿ

Comments are closed.