
ಬೆಂಗಳೂರು: ಯುವತಿಯರೇ, ಪರಿಚಯವಿಲ್ಲದ ಯುವಕರನ್ನ ಫೇಸ್‍ಬುಕ್‍ನಲ್ಲಿ ಫ್ರೆಂಡ್ ಮಾಡಿಕೊಳ್ಳೋ ಮುನ್ನ ಎಚ್ಚರವಾಗಿರಿ. ಯಾಕಂದ್ರೆ ಹುಡುಗಿಯರನ್ನ ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಫೀಲಂನಲ್ಲಿ ಹೀರೋಯಿನ್ ಮಾಡೋದಾಗಿ ಹೇಳಿ ಅವರನ್ನ ಕಿಡ್ನಾಪ್ ಮಾಡುತ್ತಿದ್ದ ಯುವಕ ಈಗ ಸಿಕ್ಕಿಬಿದ್ದಿದ್ದಾನೆ.
22 ವರ್ಷದ ರಾಹುಲ್ ಬಂಧಿತ ಆರೋಪಿ. ಈತ ಗ್ರಂಥ ಎಂಬ ಹುಡುಗಿಯನ್ನು ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡು ಮಾಡೆಲ್ ಮಾಡೋ ಆಸೆ ತೋರಿಸಿ ನಂತರ ಕಿಡ್ನಾಪ್ ಮಾಡಿದ್ದ. ಆಕೆಯನ್ನ ಊಟಿಯ ಲಾಡ್ಜ್ ನಲ್ಲಿ ಇರಿಸಿಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಆಕೆ ಸೈಲೆಂಟಾಗಿರುವಂತೆ ಮೆಡಿಸಿನ್ ಕೊಡ್ತಿದ್ದ. ಯುವತಿಯ ಮೊಬೈಲ್ ಕಿತ್ಕೊಂಡು ಆಕೆಯ ಫ್ರೆಂಡ್ಸ್‍ಗೆ, ಸಂಬಂಧಿಗಳಿಗೆ ನಾನು ನನ್ನ ಬಾಯ್‍ಫ್ರೆಂಡ್ ಜೊತೆ ಹೊಗ್ತಿದ್ದೀನಿ ಮದುವೆಯಾಗ್ತೀನಿ ಅಂತ ಮೆಸೇಜ್ ಮಾಡ್ತಿದ್ದ. ಬಳಿಕ ಆಕೆಯ ಪೋಷಕರಿಗೆ ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡ್ತಿದ್ದ. ಹಣವನ್ನು ನೀಡದಿದ್ರೆ ತಾಳಿ ಕಟ್ಟುವ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕುವುದಾಗಿ ಬೆದರಿಸಿದ್ದ. ತನ್ನನ್ನು ಟ್ರೇಸ್ ಮಾಡಬಾರದು ಎಂದು ಮೆಸೇಜ್, ಕಾಲ್ ಎಲ್ಲವೂ ಫೇಸ್‍ಬುಕ್ ಮೂಲಕವೇ ಮಾಡ್ತಿದ್ದ.

ಹುಡುಗಿ ಸೇಫ್: ಕಿಡ್ನ್ಯಾಪ್ ಮಾಡಿದ ಕಿರಾತಕ ರಾಹುಲ್‍ನನ್ನ ಈಗ ಮಹದೇವಪುರ ಪೊಲೀಸರು ಬಂಧಿಸಿದ್ದು, ಯುವತಿ ಗ್ರಂಥಳನ್ನು ಸೇಫಾಗಿ ಮನೆಗೆ ವಾಪಸ್ ಕರೆತಂದಿದ್ದಾರೆ. ಇಡೀ ಘಟನೆಯನ್ನ ಗ್ರಂಥ ತಂದೆ ನಾಗೇಶ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.
ಫೋಟೋಶೂಟ್‍ಗೆ ಕರೆಸಿ ಕಿಡ್ನ್ಯಾಪ್: ಯುವತಿಯರನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡ ನಂತರ ಅವರಿಗೆ ಮಾಡೆಲ್ ಮಾಡುವ ಆಸೆ ತೋರಿಸುತ್ತಿದ್ದ ರಾಹುಲ್, ಫೋಟೋ ಶೂಟ್ ಅಂತ ಕರೆಸಿ ಕಿಡ್ನಾಪ್ ಮಾಡುತ್ತಿದ್ದ.
Comments are closed.