
ವಿಶ್ವಾದಾದ್ಯಂತ ಪ್ರತಿವರ್ಷ ಜೂನ್ 14ನೇ ತಾರೀಕಿನಂದು “ವಿಶ್ವ ರಕ್ತದಾನಿಗಳ ದಿನ” ಆಚರಿಸಲಾಗುತಿದೆ – ಈ ಬಾರಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ನಡೆಸಲಾಗುತಿರುವ ರಕ್ತದಾನ ಅಭಿಯಾನದಲ್ಲಿ ಜೂನ್ 14ನೇ ತಾರೀಕಿನಂದೇ ಮೊಗವೀರ್ಸ್ ಯು.ಎ.ಇ. ಸಂಘಟನೆಯ ರಕ್ತದಾನಿಗಳಿಗೆ ರಕ್ತದಾನ ನೀಡುವ ಅವಕಾಶ ದೊರೆಯಿತು.












14ನೇ ತಾರೀಕು ಮಂಗಳವಾರ ರಾತ್ರಿ 8.30 ರಿಂದ ದುಬಾಯಿ ಲತಿಫಾ ಹಾಸ್ಪಿಟಲ್ ರಕ್ತ ಸಂಗ್ರಹಣಾ ಕೇಂದ್ರದಲ್ಲಿ ಅತೀ ಉತ್ಸಾಹದಿಂದ ಮೋಗವೀರ್ಸ್ ಯು.ಎ.ಇ. ಸದಸ್ಯರು, ಪತ್ರಕರ್ತರು, ಇನ್ನಿತರ ಸ್ನೇಹಿತ ಮಿತ್ರರು ಭಾಗವಹಿಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದರು.





ಮೊಗವೀರ್ಸ್ ಯು.ಎ.ಇ. ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಸಾಲಿಯಾನ್ ರವರ ನೇತ್ರತ್ವದಲ್ಲಿ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಒಗ್ಗೂಡಿ ಆಯೋಜಿಸಿದ ಕಾರ್ಯಕ್ರಮ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಫಲತೆಯನ್ನು ಪಡೆಯಿತು.
Comments are closed.