ಕರ್ನಾಟಕ

ಸ್ವದೇಶಿ ನಿರ್ಮಿತ ಎಚ್ ಟಿಟಿ-40 ತರಬೇತಿ ವಿಮಾನ ಹಾರಾಟ ಯಶಸ್ವಿ

Pinterest LinkedIn Tumblr

499896-manohar-parrikar-httಬೆಂಗಳೂರು:ಇಲ್ಲಿನ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವದೇಶಿ ನಿರ್ಮಿತ ಹಿಂದೂಸ್ತಾನ್ ಟರ್ಬೋ ಟ್ರೈನರ್ 40 ತರಬೇತಿ ವಿಮಾನದ ಮೊದಲ ಹಾರಾಟಕ್ಕೆ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ಶುಕ್ರವಾರ ಚಾಲನೆ ನೀಡಿದ್ದರು.

2 ಸೀಟನ್ನು ಹೊಂದಿರುವ ಈ ಎಚ್ಟಿಟಿ-40 ವಿಮಾನವನ್ನು ಎಚ್ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ವಿನ್ಯಾಸಗೊಳಿಸಿದೆ. ಗ್ರೂಪ್ ಕ್ಯಾಪ್ಟನ್ ಸಿ.ಸುಬ್ರಮಣಿಯಂ ಮತ್ತು ಗ್ರೂಪ್ ಕ್ಯಾಪ್ಟನ್ ವೇಣುಗೋಪಾಲ್ ಅವರು ಸುಮಾರು 15 ನಿಮಿಷಗಳ ಕಾಲ ಹಾರಾಟ ನಡೆಸಿದರು.

ಪ್ರಾಥಮಿಕ ಹಾರಾಟದ ಈ ವಿಮಾನ ಸಂಪೂರ್ಣ ಮೇಕ್ ಇನ್ ಇಂಡಿಯಾ ತಂತ್ರಜ್ಞಾನ ಹೊಂದಿದ್ದು, 2013ರಲ್ಲಿ ವಿಮಾನ ವಿನ್ಯಾಸ ಮತ್ತು ಡೆವಲಪಿಂಗ್ ಕಾರ್ಯವನ್ನು ಪ್ರಾರಂಭಿಸಿ ಮೇ 2015ರಲ್ಲಿ ವಿನ್ಯಾಸವನ್ನು ಅಂತಿಮಗೊಳಿಸಲಾಯಿತು. ಈ ಸ್ವದೇಶಿ ನಿರ್ಮಿತ ಎಚ್ಟಿಟಿ-40 ವಿಮಾನವನ್ನು 12 ತಿಂಗಳೊಳಗೆ ಯಶಸ್ವಿಯಾಗಿ ಹಾರಾಟ ನಡೆಸಲಾಗಿದೆ ಎಂದು ಪರ್ರೀಕರ್ ಟ್ವೀಟ್ ಮಾಡುವ ಮೂಲಕ ಎಚ್ ಎಎಲ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತೀಯ ವಾಯುಸೇನೆ ಈಗಾಗಲೇ 70 ಎಚ್ಟಿಟಿ-40 ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ ಎಂದು ವರದಿ ತಿಳಿಸಿದೆ. ಎಚ್ ಟಿಟಿ-40 ಯೋಜನೆಯು ಯುಪಿಎ ಸರಕಾರದ ಅವಧಿಯಲ್ಲಿ ಬಹುತೇಕ ನನೆಗುದಿಗೆ ಬಿದ್ದಿತ್ತು. ಆದರೆ ಎನ್‍ಡಿಎ ಸರಕಾರದ ರಕ್ಷಣಾ ಸಚಿವ ಮನೋಹರ್ ಪರಿಕರ್ ಅವರು ಸೇನೆ ಮತ್ತು ಎಚ್‍ಎಎಲ್ ಜತೆ ಮಾತುಕತೆ ನಡೆಸಿ ಯೋಜನೆಗೆ ಮರು ಚಾಲನೆ ನೀಡಿದ್ದರು.
-ಉದಯವಾಣಿ

Comments are closed.