ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ 8 ಶಾಸಕರು ಅಡ್ಡಮತದಾನ ಮಾಡಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಜನತೆ ಬುದ್ಧಿ ಕಲಿಸುತ್ತಾರೆ ಎಂದು ಪಕ್ಷದ ಮುಖಂಡ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡಾಯ ವೆದ್ದಿರುವ ಶಾಸಕರ ನಡೆ ಸರಿಯಿಲ್ಲ. ಇವರೆಲ್ಲರಿಗೂ ನೈತಿಕತೆ ಇದ್ದರೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾ ವಣೆಯಲ್ಲಿ ಗೆದ್ದು ಬರಲಿ ಎಂದು ಸವಾಲು ಹಾಕಿದರು. ಇವರ ಜತೆ ಯಾವುದೇ ಕಾರ್ಯ ಕರ್ತರು ನಿಲ್ಲುವುದಿಲ್ಲ. ನಾವೆಲ್ಲ ಪಕ್ಷಕ್ಕೆ ನಿಷ್ಟ ಇಟ್ಟಿದ್ದೇವೆಯೇ ಹೊರತು ಇಂತಹವರಿಗಲ್ಲ.
ನಾವು ತಳಮಟ್ಟದಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇವೆ. ಮುಂದೆಯೂ ಪಕ್ಷದಲ್ಲೇ ಇರುತ್ತೇವೆ ಎಂದು ಹೇಳಿದರು. ಈ ಶಾಸಕರು ಪಕ್ಷದ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಅದರಲ್ಲೂ ಜಮೀರ್‌ಅಹಮ್ಮದ್ ಖಾನ್ ಕಳೆದ ವಿಧಾನಸಭೆ ಚುನಾವಣೆ ವೇಳೆ ನನಗೆ ಸಿಗಬೇಕಿದ್ದ ಟೆಕೆಟ್ ತಪ್ಪಿಸಿ ಹಣದ ಆಸೆಗೆ ಬೇರೆಯವರಿಗೆ ಕೊಡಿಸಿದ್ದರು ಎಂದು ಆರೋಪಿಸಿದರು. ಇದೇ ವೇಳೆ ಬಿಬಿಎಂಪಿ ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಮಾತನಾಡಿ, ಕಾರ್ಪೋರೇಟರ್‌ಗಳನ್ನು ದುಡ್ಡುಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾವ್ಯಾರೂ ಹಣಕ್ಕೆ ನಮ್ಮನ್ನು ಮಾರಿಕೊಳ್ಳುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೆ.ಕುಮಾರ್, ರಾಜ್ಯ ಕಾರ್ಯ ದರ್ಶಿ ಸಿದ್ದರಾಜು, ಮುಖಂಡರಾದ ಮಂಜು, ಕೃಷ್ಣಮೂರ್ತಿ ಇದ್ದರು.
Comments are closed.