ಕರ್ನಾಟಕ

ಯಾವ ದೇಶಗಳು ರೇಪ್ ಅಪರಾಧಿಗೆ ಯಾವ ರೀತಿ ಭಯಾನಕ ಶಿಕ್ಷೆ ವಿಧಿಸುತ್ತವೆ….. ಇಲ್ಲಿದೆ ನೋಡಿ

Pinterest LinkedIn Tumblr

rape_irana_pic

ಅತ್ಯಾಚಾರವು ಘೋರ ಅಪರಾಧ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾವೂದೇ ವ್ಯಕ್ತಿಗೆ ಒಪ್ಪಿಗೆ ಇಲ್ಲದೆ ನಡೆಸುವ ಯಾವುದೇ ಲೈಂಗಿಕ ಕ್ರಿಯೆ, ಲೈಂಗಿಕ ಕಿರುಕುಳಗಳು ವ್ಯಾಪಕ ಅರ್ಥದಲ್ಲಿ ರೇಪ್ ಎಂದು ಕರೆಯಲಾಗುತ್ತಿದೆ. ಇಂಥಹ ಹೀನ ಕೃತ್ಯಕ್ಕೆ ಶಿಕ್ಷೆಯಾಗಬೇಕು ಎನ್ನುವುದರಲ್ಲಿ ಯಾರಿಗೂ ಯಾವುದೇ ತಕರಾರಿಲ್ಲ. ಜಗತ್ತಿನ ಕೆಲವು ರಾಷ್ಟ್ರಗಳು ರೇಪ್ ಕುರಿತಂತೆ ತಮ್ಮದೇ ಆದ ಕಾನೂನನ್ನು ಮಾಡಿಕೊಂಡಿವೆ. ಹಾಗಾದರೆ ಯಾವ ದೇಶಗಳು ರೇಪ್ ಅಪರಾಧಿಗೆ ಯಾವರೀತಿ ಶಿಕ್ಷೆ ವಿಧಿಸುತ್ತವೆ ಎಂಬುದನ್ನು ನೀವೂ ಒಮ್ಮೆ ನೋಡಿ..

ಇರಾನ್
ಅಪರಾಧ ಕೃತ್ಯಗಳಿಗೆ ಇರಾನ್ ಗಲ್ಲು ಶಿಕ್ಷೆ ವಿಧಿಸುವುದು ಸರ್ವೇ ಸಾಮಾನ್ಯ.
ಅದರಲ್ಲೂ ಅತ್ಯಚಾರ ಮಾಡಿದ ಆರೋಪಿಗಳಿಗೆ ನೇಣಿಗೆ ಹಾಕಲಾಗುತ್ತದೆ. ಇನ್ನೂ ಕೆಲವೊಮ್ಮೆ ಸಾವರ್ಜನಿಕ ಪ್ರದೇಶಗಳಲ್ಲಿ ಅಪರಾಧಿಗೆ ಕಲ್ಲು ಹೊಡೆದು ಸಾಯಿಸಲಾಗುತ್ತದೆ.
ಆಪ್ಘಾನಿಸ್ತಾನ

rape_afganthsna

ಆಪ್ಘಾನಿಸ್ತಾನದಲ್ಲೂ ಇಸ್ಲಾಮಿಕ್ ಕಾನೂನನ್ನು ಅನುಸರಿಸಲಾಗುತ್ತದೆ. ಇಲ್ಲೂ ಕೂಡ ರೇಪ್ ಮಾಡಿದಾತನಿಗೆ ಗಲ್ಲೇ ಗತಿ. ಇಲ್ಲವೇ ಆತನ ತಲೆಗೆ ಗುಂಡಿಟ್ಟು ಸಾಯಿಸಲಾಗುತ್ತದೆ. ರೇಪ್ ನಡೆದ ನಾಲ್ಕು ದಿನಗಳೊಳಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ.

rape_china_1

ಚೀನಾ
ನಮ್ಮ ನೆರೆಯ ಚೀನಾದಲ್ಲೂ ರೇಪ್ ಮಾಡಿದಾತನನ್ನು ಕಠೋರವಾಗಿ ಶಿಕ್ಷಿಸಲಾಗುತ್ತದೆ. ಕೆಲವೊಮ್ಮೆ ನಿರಂಕುಶ ಆಡಳಿತದಲ್ಲಿ ನಿರಪರಾಧಿಗಳಿಗೂ ಶಿಕ್ಷೆಯಾಗುವ ಸಾಧ್ಯತೆಗಳಿರುತ್ತವೆ. ಒಮ್ಮೆ ವ್ಯಕ್ತಿ ರೇಪ್ ಮಾಡಿರುವುದು ಸಾಬೀತಾದರೆ ಮರಣದಂಡನೆ ಖಾಯಂ ಎಂದೇ ಅರ್ಥ. ಅಪರಾಧಿಗೆ ಶಿಕ್ಷೆ ಎಷ್ಟು ಕಠೋರವಾಗಿರುತ್ತದೆ ಎಂದರೆ ಬೆನ್ನುಹುರಿ ಕತ್ತಿಗೆ ಸಂಪರ್ಕಿಸುವ ಮಧ್ಯಭಾಗಕ್ಕೆ ಬಂದೂಕಿನಿಂದ ಶೂಟ್ ಮಾಡಲಾಗುತ್ತದೆ. ಮುಂದೇನಾಗಬಹುದು ನೀವೇ ಊಹಿಸಿಕೊಳ್ಳಿ

rape_korioya

ಉತ್ತರ ಕೊರಿಯ
ರೇಪ್ ಮಾಡಿದ ಪಾಪಿಗೆ ಶಿಕ್ಷೆ ನೀಡುವುದರಲ್ಲಿ ಉತ್ತರ ಕೋರಿಯಾವು ಹಿಂದೆ ಬಿದ್ದಿಲ್ಲ. ರೇಪ್ ಮಾಡಿದ ವ್ಯಕ್ತಿಗೆ ಅಧಿಕಾರಿಗಳು ತಲೆಗೆ ಇಲ್ಲವೆ ಮರ್ಮಾಂಗಕ್ಕೆ ಶೂಟ್ ಮಾಡುತ್ತಾರೆ. ಆ ಮೂಲಕ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ. ಈ ರೀತಿಯ ಶಿಕ್ಷೆ ರೇಪಿಸ್ಟ್’ಗಳಿಗೆ ಎಚ್ಚರಿಕೆಯ ಕರೆಗಂಟೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸೌದಿ ಅರೇಬಿಯಾ ಒಂದು ಇಸ್ಲಾಂ ರಾಷ್ಟ್ರ. ಅಪರಾಧಗಳಿಗೆ ಕಠಿಣ ಕಾನೂನಿನ ಬಲವಿದೆ. ಸಾರ್ವಜನಿಕ ಸ್ಥಳದಲ್ಲಿ ರೇಪ್ ಮಾಡಿದ ನೀಚನ ತಲೆ ಕತ್ತರಿಸಲಾಗುತ್ತದೆ. ಅಪರಾಧಿಯನ್ನು ಮೆಕ್ಕಾ ಕಡೆ ಮುಖ ಮಾಡಿ ಮಂಡಿಯೂರಿ ಕೂರಿಸಲಾಗಿರುತ್ತದೆ, ನಂತರ ಪೊಲೀಸ್ ಅಧಿಕಾರಿಯು ಹಿಂದಿನಿಂದ ಒಂದೇ ಹೊಡೆತಕ್ಕೆ ಕತ್ತಿಯಿಂದ ತಲೆಯನ್ನು ಕತ್ತರಿಸಲಾಗುತ್ತದೆ. ಮತ್ತೊಬ್ಬ ಅಪರಾಧಿ ಕನಸಿನಲ್ಲೂ ರೇಪ್ ಬಗ್ಗೆ ಯೋಚಿಸಲಾರ

rape_saoudi_arebiya

ಭಾರತ:

rape_india_pic

ಭಾರತದಲ್ಲಿ ರೇಪ್ ಅಪರಾಧಿಗಳಿಗೆ ಉಳಿದ ದೇಶಗಳಿಗೆ ಹೋಲಿಸಿದರೆ ಶಿಕ್ಷೆ ಅಷ್ಟೇನು ಕಠಿಣವಾಗಿಲ್ಲ. 2013ರಲ್ಲಿ ನಿರ್ಭಯ ಪ್ರಕರಣ ನಡೆಯುವುದಕ್ಕಿಂತ ಮೊದಲು ಅತ್ಯಚಾರವನ್ನು ಒಂದು ಪ್ರಮುಖ ಅಪರಾಧ ಎಂದು ಪರಿಗಣಿಸಿರಲಿಲ್ಲ. ನಿರ್ಭಯಾ ಪ್ರಕರಣದ ನಂತರ ದೇಶದಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಸತ್’ನಲ್ಲಿ ಅತ್ಯಚಾರ ವಿರೋದಿ ಕಾನೂನನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಅಪರಾಧಿಗೆ ಜೀವಾವಧಿ ಶಿಕ್ಷೆ, ಕೆಲವೊಂದು ಅಪರೂಪದ ಕೃತ್ಯಗಳಿಗೆ ಮರಣದಂಡನೆಯನ್ನೂ ವಿಧಿಸಲಾಗುತ್ತಿದೆ.

Comments are closed.