ಕರ್ನಾಟಕ

ಜೆಡಿಎಸ್ ನಿರ್ನಾಮ ಮಾಡಿದ್ರೆ ತಲೆ ಬೋಳಿಸಿಕೊಳ್ಳುವೆ: ದಿಗ್ವಿಗೆ ಗೌಡ

Pinterest LinkedIn Tumblr

gowda-story_ಬೆಂಗಳೂರು:ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಎನ್ನಲು ದಿಗ್ವಿಜಯ್ ಸಿಂಗ್ ಯಾರು? ಮಧ್ಯಪ್ರದೇಶದಲ್ಲಿ 10 ವರ್ಷ ಮುಖ್ಯಮಂತ್ರಿಯಾಗಿದ್ದರು…ಅಲ್ಲಿ ಕಾಂಗ್ರೆಸ್ ಪರಿಸ್ಥಿತಿ ಈಗ ಏನಾಗಿದೆ ಎಂದು ಗೊತ್ತು. ರಾಜ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡಿದ್ರೆ ತಲೆ ಕೂದಲು ಬೋಳಿಸಿಕೊಳ್ಳುವೆ…ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ನೇರ ಸವಾಲು ಹಾಕಿದ್ದಾರೆ.

ಟಿವಿ9 ಚಾನೆಲ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷದ ಬೆಳವಣಿಗೆ, ಬಂಡಾಯ ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು. ಅಲ್ಲದೇ ಜೆಡಿಎಸ್ ಭಿನ್ನಮತೀಯ ಶಾಸಕರ ನೇರ ಆರೋಪಕ್ಕೂ ಪ್ರತಿಕ್ರಿಯೆ ನೀಡಿದರು.

ಸಂದರ್ಶನದಲ್ಲಿ ದಿಗ್ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದಿಗ್ವಿಜಯ್ ಸಿಂಗ್ ಯಾರ್ರಿ? ಸೋನಿಯಾ ಗಾಂಧಿಗೆ ಇವರೆಲ್ಲಾ ಅನಿವಾರ್ಯ, ಹಾಗಾಗಿ ಬೇಕಾಗಿದ್ದಾರೆ. ನನಗೆ ಯಾರ್ರಿ ಇವರೆಲ್ಲಾ…ಇವರಿಂದ ನನಗೆ ಏನಾಗಬೇಕಾಗಿದೆ ಎಂದು ಹರಿಹಾಯ್ದರು.

ರಾಜ್ಯದ ಜನತೆಗೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಜೆಡಿಎಸ್ ಪಕ್ಷ ಒಬ್ಬ ದೇವೇಗೌಡ, ಕುಮಾರಸ್ವಾಮಿಯದ್ದಲ್ಲ. ಈ ಪಕ್ಷವನ್ನು ಉಳಿಸುವ ಜವಾಬ್ದಾರಿ ರಾಜ್ಯದ ಜನರದ್ದಾಗಿದೆ. ಜೆಡಿಎಸ್ ಅಪ್ಪ, ಮಕ್ಕಳ ಪಕ್ಷ ಎಂಬುದು ಸರಿಯಲ್ಲ, ನಾವು ಎಲ್ಲರಿಗೂ ಆದ್ಯತೆ ಕೊಟ್ಟಿದ್ದೇವೆ ಎಂದು ಹೇಳಿದರು.
-ಉದಯವಾಣಿ

Comments are closed.