ಕರ್ನಾಟಕ

ಎಂಟು ಮಂದಿ ರೆಬಲ್ ಶಾಸಕರ ಅಮಾನತ್ತು ಸಾಧ್ಯತೆ: ಕುಮಾರಸ್ವಾಮಿ

Pinterest LinkedIn Tumblr

jdsಬೆಂಗಳೂರು: ನಾಳೆ ನಡೆಯಲಿರುವ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಎಂಟು ಮಂದಿ ರೆಬಲ್ ಶಾಸಕರ ಅಮಾನತ್ತುಗೊಳಿಸುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರೆಬೆಲ್ ಶಾಸಕರು ವಿಪ್ ಉಲ್ಲಂಘಿಸಿದ್ದರಿಂದ ಅವರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಜಮೀರ್ ಅಹ್ಮದ್, ಇಕ್ಬಾಲ್ ಅನ್ಸಾರಿ, ಬಂಡಿಸಿದ್ದೇಗೌಡ, ಗೋಪಾಲಯ್ಯ ಚೆಲುವರಾಯ ಸ್ವಾಮಿ, ಅಖಂಡ ಶ್ರೀನಿವಾಸ್ ಮೂರ್ತಿ,ಭೀಮಾನಾಯ್ಕ, ಎಚ್.ಸಿ ಬಾಲಕೃಷ್ಣ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಜೆಡಿಎಸ್ ಏಜೆಂಟ್‌‍ರಿಗೆ ತೋರಿಸಿಯೇ ಮತಹಾಕಿದ್ದೇವೆ. ಜೆಡಿಎಸ್ ವರಿಷ್ಠರ ತಪ್ಪು ನಿರ್ಧಾರಗಳಿಂದ ಅನಿವಾರ್ಯವಾಗಿ ನಾವು ನಮ್ಮ ತೀರ್ಮಾನ ತೆಗೆದುಕೊಳ್ಳಬೇಕಾಯಿತು. ಘಟನೆಗಳಿಗೆಲ್ಲಾ ಜೆಡಿಎಸ್ ವರಿಷ್ಠರೇ ಹೊಣೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪಿಸಿದ್ದರು.

ಎಂಟು ಮಂದಿ ಬಿನ್ನಮತೀಯ ಶಾಸಕರು ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದರಿಂದ ಅವರ ಮತಗಳನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.

Comments are closed.