ಕರ್ನಾಟಕ

ಶಾಸಕರ ಪ್ರವಾಸ: ಕಾಂಗ್ರೆಸ್ ಪಾತ್ರವಿಲ್ಲ ಡಿಕೆಶಿ ಸ್ಪಷ್ಟನೆ

Pinterest LinkedIn Tumblr

5dks1clrಬೆಂಗಳೂರು, ಜೂ. ೬- ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರರು ಮತ್ತು ಇತರೆ ಸಣ್ಣ ಪಕ್ಷಗಳ ಶಾಸಕರ ಬೆಂಬಲ ಪಡೆಯಲು ಪ್ರವಾಸ ಸೇರಿದಂತೆ ಯಾವುದೇ ರೀತಿಯ ಪ್ಯಾಕೇಜ್ ನೀಡಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದಿಲ್ಲಿ ಸ್ಪಷ್ಟಪಡಿಸಿದರು.
ವಿಧಾನಸೌಧದ ಮುಂಭಾಗದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಕೃಷಿ ಅಭಿಯಾನ ಪ್ರಚಾರಾದೋಂಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ಶಾಸಕರು ಪ್ರವಾಸ ಹೋಗುವುದನ್ನು ನಾವು ತಡೆಯಲು ಆಗುವುದಿಲ್ಲ. ಅವರು ಸರ್ವ ಸ್ವತಂತ್ರರು. ಅವರು ಎಲ್ಲಿಗೆ ಬೇಕಾದರೂ ಹೋಗುತ್ತಾರೆ. ಶಾಸಕರನ್ನು ಪ್ರವಾಸ ಕಳುಹಿಸುವ ಅಗತ್ಯ ನಮಗಿಲ್ಲ ಎಂದರು.
ಕೆಲವರು ಶಾಸಕರು ಶಿರಡಿ ಸಾಯಿಬಾಬು, ಶನೇಶ್ವೇರ ದೇವಸ್ಥಾನಗಳಿಗೆ ಭೇಟಿ ನೀಡಲು ಹೋಗಿದ್ದರೆ, ಮತ್ತೆ ಕೆಲವರು ಮುಂಬೈಗೆ ತೆರಳಿದ್ದಾರೆ. ಇನ್ನು ಕೆಲವರು ತಮ್ಮ ವೈಯುಕ್ತಿಕ ಕೆಲಸಗಳಿಗಾಗಿ ಬೇರೆ ಬೇರೆ ಪ್ರವಾಸ ಕೈಗೊಂಡಿದ್ದಾರೆ. ಕೆಲವರು ಸಿಂಗಾಪೂರ್‌ಗೂ ಹೋಗಿದ್ದಾರೆ ಎಂದರು.
ಶಾಸಕರ ಬೆಂಬಲ ಪಡೆಯಲು ನಾವು ಯಾವುದೇ ಒತ್ತಡ ಹಾಕಿಲ್ಲ. ಅವರೆಲ್ಲಾ ಪ್ರಬುದ್ಧರಿದ್ದಾರೆ. ಅವರನ್ನು ಮನವೊಲಿಸಿ ಪ್ರವಾಸ ಕರೆದೊಯ್ಯುಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಜೆಡಿಎಸ್ ವಿನಾಃ ಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಜೆಡಿಎಸ್ ಶಾಸಕರು ಗೋವಾಕ್ಕೆ ಹೋಗಿದ್ದರು. ಬಿಜೆಪಿ ಶಾಸಕರು ಹೈದರಾಬಾದ್‌ಗೆ ಹೋಗಿದ್ದರು. ಆಗ ನಾವೇನೂ ಮಾತನಾಡಲಿಲ್ಲ. ಈಗ ಎದುರಾಗಿರುವ ರಾಜ್ಯಸಭೆ ಮತ್ತು ವಿಧಾನಪರಿಷತ್ ಸಭೆಯಲ್ಲಿ ನಾವು ಯಾವುದೆ ನಾಟಕ ಮಾಡುತ್ತಿಲ್ಲ. ಅದರ ಅಗತ್ಯವೂ ಇಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.
ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷವನ್ನು ಮುಗಿಸುವ ಉದ್ದೇಶ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರಿಗಾಗಲಿ ನಮಗಾಗಲಿ ಇಲ್ಲ. ಒಟ್ಟಾರೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿದ್ದೇವೆ. ಪಕ್ಷೇತರ ಶಾಸಕರು ಮತ್ತು ಇತರೆ ಪಕ್ಷಗಳ ಶಾಸಕರಿಗೆ ಅವರವರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯವಾಗಿದ್ದರೆ ಸರಿಪಡಿಸುತ್ತೇವೆ ಎಂಬ ಭರವಸೆ ನೀಡಿದ್ದೇವೆ. ನಾವು ರೆಸಾರ್ಟ್ ರಾಜಕಾರಣ ಮಾಡುತ್ತಿಲ್ಲ. ಪ್ರವಾಸ ಹೋಗಿರುವ ಶಾಸಕರೆಲ್ಲಾ ಆಗಿಂದಾಗ್ಗೆ ಪ್ರವಾಸ ಮಾಡುತ್ತಾರೆ. ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದರು.

Comments are closed.