ಕರ್ನಾಟಕ

ಸಿಪಾಯಿ ದಂಗೆ ಆಗ್ಬೇಕಾ ?:ಪತ್ರಕರ್ತನ ಪ್ರಶ್ನೆಗೆ ಪರಮೇಶ್ವರ್‌ ಕಿಡಿ

Pinterest LinkedIn Tumblr

parameshwarಬೆಂಗಳೂರು : ಎನ್ರೀ..ಸಿಪಾಯಿ ದಂಗೆ ಆಗ್ಬೇಕಾ ? ನೀವು ಶಶಿಧರ್‌ ಇದ್ದಲ್ಲಿಗೆ ಹೋಗ್ತಿàರಾ(ಪರೋಕ್ಷವಾಗಿ ಜೈಲಿಗೆ) ? ಇದು ಪತ್ರಕರ್ತರೊಬ್ಬರ ಪ್ರಶ್ನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಕಿಡಿ ಕಾರಿದ ಪರಿ .

ಶನಿವಾರ ಪ್ರತಿಭಟನೆ ಹಿಂಪಡುಕೊಂಡು ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಕರೆದ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರೊಬ್ಬರು ರಾಜ್ಯ ಪೊಲೀಸ್‌ ಮಹಾ ಸಂಘದ ಅಧ್ಯಕ್ಷ ಶಶಿಧರ್‌ ಅವರನ್ನು ಬಂಧಿಸಿ ದೇಶ ದ್ರೋಹದ ಅಡಿ ಪ್ರಕರಣ ದಾಖಲಿಸಿದ ಕುರಿತಾಗಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪರಮೇಶ್ವರ್‌ ಅವರು ಶಶಿಧರ್‌ ಅವರು ಫೇಸ್‌ಬುಕ್‌ನಲ್ಲಿ ಗೃಹ ಇಲಾಖೆಯ ವಿರುದ್ಧ ಸಿಪಾಯಿ ದಂಗೆ ನಡೆಸುವುದಾಗಿ ಬರೆದುಕೊಂಡಿದ್ದಾರೆ. ಹೀಗಾಗಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.

ಇದಕ್ಕೆ ಪ್ರತಿಯಾಗಿ ಪತ್ರಕರ್ತ ಸಿಪಾಯಿ ದಂಗೆಯಿಂದಲೇ ಸ್ವಾತಂತ್ರ್ಯ ಸಿಕ್ಕಿದ್ದಲ್ಲವೇ ಎಂದಿದ್ದಾರೆ.

ಈ ವೇಳೆ ಕೆಂಡಾಮಂಡಲವಾದ ಪರಮೇಶ್ವರ್‌ ಅವರು ಏನ್ರೀ ..ನಿವೂ ಸಿಪಾಯಿ ದಂಗೆ ಬಯಸ್ತೀರಾ? ಬಯಸುವುದಾರೆ ಬಯಸಿ ..ಶಶಿಧರ್‌ ಇರುವ ಕಡೆ ನಿವೂ ಹೋಗ್ತೀರಾ ? (ಪರೋಕ್ಷವಾಗಿ ಜೈಲಿಗೆ )ಎಂದು ಕಿಡಿ ಕಾರಿದರು.

ಪೊಲೀಸ್‌ ಪ್ರತಿಭಟನೆಗೆ ಕರೆ ನೀಡಿದ್ದ ಶಶಿಧರ್‌ ಅವರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
-ಉದಯವಾಣಿ

Comments are closed.