ಕರ್ನಾಟಕ

93ನೇ ವಸಂತಕ್ಕೆ ಕಾಲಿಟ್ಟ ಡಿಎಂಕೆ ಅಧಿನಾಯಕ ಕರುಣಾ ನಿಧಿ

Pinterest LinkedIn Tumblr

karunanidiಬೆಂಗಳೂರು,ಜೂ.3-ಸಿಹಿ ವಿತರಣೆ, ಸಾಮಾಜಿಕ ನೆರವು ನೀಡಿಕೆ, ರಕ್ತದಾನ ನಡೆಸುವ ಮೂಲಕ ಡಿಎಂಕೆ ಅಧಿನಾಯಕ ಎಂ.ಕರುಣಾನಿಧಿ ಅವರ 93ನೇ ಜನ್ಮ ದಿನವನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಇಂದು ತಮಿಳುನಾಡಿನಾದ್ಯಂತ ಆಚರಿಸಿದರು. ಈ ಸಂದರ್ಭ ಅಭಿಮಾನಿಗಳ ಸಂಭ್ರಮದಲ್ಲಿ ತಾವೂ ಭಾಗಿಯಾದ ಕರುಣಾನಿಧಿಯವರು ಪಕ್ಷದ ಸಂಸ್ಥಾಪಕ ಸಿ.ಎನ್.ಅಣ್ಣಾ ದೊರೈ ಹಾಗೂ ವಿಚಾರವಾದಿ ನಾಯಕ ರಾಮಸ್ವಾಮಿ ಪೆರಿಯಾರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

ಐದು ಬಾರಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ 93ರ ಹರೆಯದ ಕರುಣಾ ನಿಧಿ ಇದೇ ವೇಳೆ ತಮ್ಮ ಸಿಐಟಿ ಕಾಲೋನಿ ನಿವಾಸದ ಬಳಿ ಸಸಿಗಳನ್ನು ನೆಟ್ಟು ನೀರೆರೆದರು. ಈ ಸಂದರ್ಭ ಅವರ ಪುತ್ರ, ಡಿಎಂಕೆ ಖಜಾಂಚಿ ಎಂ.ಕೆ.ಸ್ಟಾಲಿನ್ ಉಪಸ್ಥಿತರಿದ್ದರು.

Comments are closed.