ಕರ್ನಾಟಕ

ಜೆಡಿಎಸ್‌ ಮುಗಿಸಲೆಂದೆ ಸ್ಟಿಂಗ್‌ ಆಪರೇಷನ್‌: ಮಾಜಿ ಪ್ರಧಾನಿ ದೇವೇಗೌಡ

Pinterest LinkedIn Tumblr

deveಬೆಂಗಳೂರು : ಜೆಡಿಎಸ್‌ ಪಕ್ಷವನ್ನು ರಾಜ್ಯದಲ್ಲಿ ಮುಗಿಸಲೆಂದೆಸ್ಟಿಂಗ್‌ ಆಪರೇಷನ್‌ ಮಾಡಲಾಗಿದೆ.ಇದರಲ್ಲಿ ಯಾವುದೇ ಸಂಶಯ ಇಲ್ಲ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಷಡ್ಯಂತ್ರ ಇದೆ. ಇದು ಇಂಡಿಯಾ ಟುಡೇ, ಟೈಮ್ಸ್‌ ನೌ ರಹಸ್ಯ ಕಾರ್ಯಾಚರಣೆನಡೆಸಿ ಶಾಸಕರ ಕುದುರೆ ವ್ಯಾಪಾರ ಬಯಲಿಗೆಳದ ವಿಚಾರಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಉತ್ತರಿಸಿದ ಪರಿ .
ಟಿವಿ9 ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ದೇವೇಗೌಡ ನಮ್ಮ ಪಕ್ಷ ಮುಗಿಸಲು ಮಾಡಿರುವ ಸಂಚು ಇದು . ಇದರಲ್ಲಿ ಯಾವುದೇ ಸಂಶಯ ಇಲ್ಲ. ಕಳೆದ ಮೂರು ವರ್ಷಗಳಿಂದಜಮೀರ್‌ ಅಹ್ಮದ್‌ ಮತ್ತು ಚಲುವರಾಯ ಸ್ವಾಮಿ ಎನೇನು ನಡೆಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತು,ಆದರೂ ನಾನು ಶಿಸ್ತು ಕ್ರಮ ಕೈಗೊಂಡಿಲ್ಲ ಎಂದರು.

ಬಸವಕಲ್ಯಾಣ ಜೆಡಿಎಸ್‌ ಶಾಸಕ ಮಲ್ಲಿಕಾರ್ಜುನ ಖೂಬಾ ,ಚಾಮುಂಡೇಶ್ವರಿ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಸ್ಟಿಂಗ್‌ನಲ್ಲಿ ಸಿಲುಕಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಖೂಬಾ ಅಂತಹವನಲ್ಲ,ಹುಡುಗಾಟಿಕೆಗೆ ಹಾಗೇ ಹೇಳಿರಬೇಕು .ದೇವೇಗೌಡರಿಗೂ ಸ್ಟಿಂಗ್‌ಗೂ ಸಂಬಂಧವಿಲ್ಲ ಎಂದರು.
-ಉದಯವಾಣಿ

Comments are closed.