ಕರ್ನಾಟಕ

ಸಿಎಂ ಎದುರೇ ಅವಾಚ್ಯ ಶಬ್ಧಗಳಿಂದ ಸ್ಟಿಂಗ್‌ ಬಗ್ಗೆ ಪಾಟೀಲ್‌ ಕಿಡಿ

Pinterest LinkedIn Tumblr

cmಬೆಂಗಳೂರು : ಇಂಡಿಯಾ ಟುಡೇ, ಟೈಮ್ಸ್‌ ನೌ ರಹಸ್ಯ ಕಾರ್ಯಾಚರಣೆಯಲ್ಲಿ ರಾಜ್ಯ ಸಭಾ ಚುನಾವಣೆಯ ಓಟಿಗಾಗಿ ಕೋಟಿ ಡೀಲ್‌ ನಲ್ಲಿ ಸಿಲುಕಿಕೊಂಡಿರುವ ಕೆಜೆಪಿಯ ಶಾಸಕ ಬಿ.ಆರ್‌.ಪಾಟೀಲ್‌ ಅವರು ಕೆಂಡಾಮಂಡಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೇ ಮಾಧ್ಯಮಗಳನ್ನು ಅವಾಚ್ಯ ಶಬ್ಧಗಳಿಂದ ಹಿಗ್ಗಾಮುಗ್ಗಾ ಬೈದಿದ್ದಾರೆ.

ಸ್ಟಿಂಗ್‌ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮ್ಯ ಅವರೊಂದಿಗೆ ಮಾತುಕತೆಗಾಗಿ ಆಗಮಿಸಿದ್ದ ಬಿ.ಆರ್‌.ಪಾಟೀಲ್‌ ಅವರು ಮಾದ್ಯಮಗಳ ಎದುರೇ ಹರಿಹಾಯ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಿದರು.

ಪಾಟೀಲ್‌ ಅವರನ್ನು ಸಮಾಧಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೀನು ತಾಳ್ಮೆ ಕಳೆದುಕೊಳ್ಳಬೇಡ,ನಿನ್ನ ಆತ್ಮ ಶುದ್ದ ಇದೆಯಲ್ಲ. ಆಮೇಲೆ ಮಾತನಾಡೋಣ ,ತನಿಖೆಯನ್ನೂ ಮಾಡೋಣ ಎಂದರು.

ಸ್ಟಿಂಗ್‌ ಆಪರೇಷನ್‌ ಮಾಡಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಾರೆ. ನಾನು ಇದರ ವಿರುದ್ದ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಪಾಟೀಲ್‌ ತಿಳಿಸಿದ್ದಾರೆ.

ವಿಧಾನಸೌಧದ ಬಳಿಯಿರುವ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಎದುರು ಬಿ.ಆರ್‌.ಪಾಟೀಲ್‌ ಅವರು ಸ್ಟಿಂಗ್‌ನ ತನಿಖೆಗೆ ಆಗ್ರಹಿಸಿ ಏಕಾಂಗಿಯಾಗಿ ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.

ಬಿ.ಆರ್‌.ಪಾಟೀಲ್‌ ಅವರು ಯಡಿಯೂರಪ್ಪ ಅವರು ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಿದಾಗ ಬಿಜೆಪಿಗೆ ಬಾರದೇ ತಟಸ್ಥವಾಗಿ ಉಳಿದಿದ್ದರು.
-ಉದಯವಾಣಿ

Comments are closed.