ಕರ್ನಾಟಕ

ಐಪಿಎಲ್ 9ರ ಚಾಂಪಿಯನ್ ಪಟ್ಟ ಯಾರಿಗೆ…ಗೆಲ್ಲುವ ಕುದುರೆ ಆರ್ಸಿಬಿ ಅಥವಾ ಹೈದರಾಬಾದಾ ?

Pinterest LinkedIn Tumblr

RCB Sunrisers Hyderabad

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಫೈನಲ್ ಗೆ ಎರಡು ಪ್ರಬಲ ತಂಡಗಳು ಎಂಟ್ರಿ ನೀಡಿದ್ದು, ಭಾನುವಾರ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫೈನಲ್ ತಂದ ವಿರಾಟ್ ಕೊಹ್ಲಿ ಒಂದೆಡೆಯಾದರೆ. ಉತ್ತಮ ನಾಯಕತ್ವದ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್ ಗೆ ತಲುಪಿಸಿದ ಕೀರ್ತಿ ಡೇವಿಡ್ ವಾರ್ನರ್ ಅವರಿಗೆ ಸಲ್ಲುತ್ತದೆ.

ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಆರ್ಸಿಬಿಗೆ ಸದೃಢವಾಗಿದ್ದರೆ. ಹೈದರಾಬಾದ್ ಮಾರಕ ಬೌಲಿಂಗ್ ಪಡೆಯನ್ನು ಹೊಂದಿದೆ. ಆರ್ಸಿಬಿ ಪರ ಸ್ಫೋಟಕ ಬ್ಯಾಟ್ ಮನ್ ಕ್ರಿಸ್ ಗೇಯ್ಲ್ ವಿಭೃಂಬಿಸಬೇಕಿದೆ. ಇನ್ನು ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಆರ್ಸಿಬಿ ತಂಡದ ಟಾಪ್ ಬ್ಯಾಟ್ಸ್ ಮನ್ ಗಳು. ಅಂತೆ ನಾಳಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಅರವಿಂದ್, ಜೋರ್ಡಾನ್ ಹಾಗೂ ವಾಟ್ಸನ್ ಮಿಂಚಬೇಕಿದೆ.

ಹೈದರಾಬಾದ್ ತಂಡದಲ್ಲಿ ಭುವನೇಶ್ವರ್ ಕುಮಾರ್ ಅತಿ ಹೆಚ್ಚು ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದು ಅವರಿಗೆ ಹೆನ್ರಿಕ್ಸ್ ಸಾಥ್ ನೀಡುತ್ತಿದ್ದಾರೆ. ಡೇವಿಡ್ ವಾರ್ನರ್ ಉತ್ತಮವಾಗಿ ಆಡುತ್ತಿದ್ದು ತಂಡದ ಗೆಲುವಿಗೆ ಕಾರಣರಾಗುತ್ತಿದ್ದಾರೆ.

Comments are closed.