ಕರಾವಳಿ

ಡಾ. ಕೃಪಾ ಆಳ್ವರಿಂದ ನಾಡಗೀತೆಗೆ ಅಗೌರವ

Pinterest LinkedIn Tumblr

Kripa_alva_twnhll_1

__ಸತೀಶ್ ಕಾಪಿಕಾಡ್

ಮಂಗಳೂರು, ಮೇ.28 : ನಮ್ಮ ದೇಶದ ಕಾನೂನು ಪ್ರಕಾರ ಯಾವೂದೇ ಕಾರ್ಯಕ್ರಮಗಳಲ್ಲಿ, ಸಭೆ ಸಮಾರಂಭಗಳಲ್ಲಿ ರಾಷ್ಟ್ರ ಗೀತೆ ಹಾಗೂ ನಾಡ ಗೀತೆ ಹಾಡುವ ಸಂದರ್ಭ ಸಾಮಾನ್ಯ ಜನರು ಕೂಡ ರಾಷ್ಟ್ರ ಗೀತೆ ಹಾಗೂ ನಾಡ ಗೀತೆಗೆ ಗೌರವ ಕೊಡಬೇಕು ಎಂಬ ನಿಯಮವಿದೆ. ಆದರೂ ಈ ನಿಯಮವನ್ನು ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಸರಕಾರಿ ಅಧಿಕಾರಿಗಳು, ಕೆಲವು ಸಚಿವರು ಹಲವಾರು ಕಡೆಗಳಲ್ಲಿ ಉಲ್ಲಂಘಿಸಿದ ಬಗ್ಗೆ ವರದಿಯಾಗುತ್ತಿರುತ್ತದೆ.

ಇದೀಗ ಈ ಸರದಿ ಮಂಗಳೂರಿನದ್ದು, ಮಂಗಳೂರಿನ ಪುರಭವನದಲ್ಲಿ ಇಂದು ನಡೆದ ಸ್ತ್ರೀ ಶಕ್ತಿ ಸಮಾವೇಶದಲ್ಲಿ ನಾಡಗೀತೆ ಹಾಡುವ ಸಂದಭ೯ ರಾಜ್ಯ ಮಹಿಳಾ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಆಳ್ವರವರು ತಮ್ಮ ಮೊಬೈಲ್‌ನಲ್ಲಿ ಬ್ಯೂಸಿಯಾಗಿದ್ದರು.ನಾಡಗೀತೆ ಹಾಡುವ ಸಂದಭ೯ ನಿರಂತರವಾಗಿ ಅವರು ಮೊಬೈಲ್‌ ಸಂಭಾಷಣೆಯಲ್ಲಿ ತೊಡಗುವ ಮೂಲಕ ನಾಡಗೀತೆಗೆ ಅಗೌರವ ತೋರಿದ್ದಾರೆ.

Kripa_alva_twnhll_2 Kripa_alva_twnhll_3 Kripa_alva_twnhll_4 Kripa_alva_twnhll_5

ವಿಶೇಷವೆಂದರೆ ಈ ಘಟನೆ ನಡೆಯುವ ಸಂದರ್ಭ ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸರಾದ ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಎಮ್‌ಎಲ್‌ಸಿ ಐವನ್ ಡಿಸೋಜಾ, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಡಾ ಅಧ್ಯಕ, ಇಬ್ರಾಹೀಂ ಕೋಡಿಜಾಲ್, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಮಹಿಳಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎನ್. ವಿಜಯ ಪ್ರಕಾಶ್, ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ, ಚಿಕ್ಕಮಗಳೂರುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜಯ್ಯ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಲಾಲಿಮಣಿ ಮುಂತಾದವರಿದ್ದರು.

ಈ ಬಗ್ಗೆ ಅಲ್ಲಿದ್ದ ಯಾರೊಬ್ಬರು ಚಕರವೆತ್ತದೆ ಇರುವುದನ್ನು ನೋಡಿದರೆ, ನಮ್ಮ ದೇಶದ ಕಾನೂನಿನಲ್ಲಿ ಜನ ಸಾಮಾನ್ಯರಿಗೊಂದು ನ್ಯಾಯ, ನಮ್ಮನ್ನು ಆಳುವವರಿಗೊಂದು ನ್ಯಾಯ ಎಂಬುವುದು ಈ ಮೂಲಕ ಸಾಬಿತಾಗುತ್ತದೆ.

Comments are closed.