ಕರ್ನಾಟಕ

ಪ್ರಿಯಕರ ಕೈಕೊಟ್ಟನೆಂದು ನೊಂದ ಯುವತಿ ನೇಣಿಗೆ ಶರಣು

Pinterest LinkedIn Tumblr

suತುಮಕೂರು, ಮೇ 26- ಪ್ರಿಯಕರ ಕೈಕೊಟ್ಟಿದ್ದರಿಂದ ಮನನೊಂದ ಯುವತಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ತಾಲ್ಲೂಕಿನ ವೀರಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ದರ್ಶಿನಿ(18) ಮೃತ ದುರ್ದೈವಿ. ಮಂಜುನಾಥ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದ ಈಕೆ, ಸದ್ಯದಲ್ಲೇ ಮದುವೆಯಾಗಲು ನಿರ್ಧರಿಸಿದ್ದಳು.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ದರ್ಶಿನಿ, ನಿನ್ನೆ ಫಲಿತಾಂಶ ನೋಡಿ ಪಾಸಾದ ಖುಷಿಯಲ್ಲಿ ತೇಲಿದ್ದಳ. ಆದರೆ, ಸಂಜೆ ತಾನು ಪ್ರೀತಿಸುತ್ತಿದ್ದ ಯುವಕನಿಗೆ ಈ ವಿಷಯ ತಿಳಿಸಿದಾಗ, ಆತ ನಿಂದಿಸಿದ್ದಲ್ಲದೆ ಮದುವೆಯಾಗಲು ನಿರಾಕರಿಸಿದ್ದ ಎಂದು ತಿಳಿದು ಬಂದಿದೆ.

ಇದರಿಂದ ಆಘಾತಗೊಂಡ ದರ್ಶಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ಮೂರು ವರ್ಷಗಳಿಂದ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಪೋಷಕರಿಗೂ ತಿಳಿದಿತ್ತು. ಈ ನಡುವೆ ಒಂದೆರಡು ಬಾರಿ ಗಲಾಟೆ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು ಎಂದು ತಿಳಿದು ಬಂದಿದೆ.

Comments are closed.