ರಾಷ್ಟ್ರೀಯ

ರಾಜನ್ ವಿರುದ್ಧ ವೈಯಕ್ತಿಕ ಟೀಕೆ ಸರಿಯಲ್ಲ: ಅರುಣ್ ಜೇಟ್ಲಿ

Pinterest LinkedIn Tumblr

arun-jaitly-swamyನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಮಾಡುತ್ತಿರುವ ವೈಯಕ್ತಿಕ ಟೀಕೆಗಳನ್ನು ತಾವು ಒಪ್ಪುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಆರ್ ಬಿಐ ಗವರ್ನರ್ ಮಾತ್ರವಲ್ಲದೆ ಯಾರ ವಿರುದ್ಧವೂ ವೈಯಕ್ತಿಕ ಟೀಕೆಗಳನ್ನು ಮಾಡುವುದನ್ನು ನಾನು ಒಪ್ಪುವುದಿಲ್ಲ. ರಿಸರ್ವ್ ಬ್ಯಾಂಕ್ ಒಂದು ಪ್ರಮುಖ ಸಂಸ್ಥೆ. ಅದು ತನ್ನ ನಿರ್ಧಾರಗಳನ್ನು ಮಾಡುತ್ತದೆ. ಆ ನಿರ್ಧಾರಗಳನ್ನು ಕೆಲವರು ಒಪ್ಪಬಹುದು, ಇನ್ನು ಕೆಲವರು ಒಪ್ಪದಿರಬಹುದು, ಆದರೆ ಅದು ಚರ್ಚೆಗೆ ಸಂಬಂಧಪಟ್ಟ ವಿಷಯ ಎಂದು ಜೇಟ್ಲಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ತಿಂಗಳು ರಾಜ್ಯಸಭೆಗೆ ಬಿಜೆಪಿಯಿಂದ ನಾಮ ನಿರ್ದೇಶನಗೊಂಡ ಕೂಡಲೇ ರಘುರಾಮ್ ರಾಜನ್ ವಿರುದ್ಧ ಆರೋಪಗಳ ಸುರಿಮಳೆಗೈದು ಅವರನ್ನು ತಕ್ಷಣವೇ ಸೇವೆಯಿಂದ ವಜಾ ಮಾಡುವಂತೆ ಒತ್ತಾಯಿಸಿದ್ದರು.

Comments are closed.