ಕರ್ನಾಟಕ

ಖಾರದಪುಡಿ ಎರಚಿ 3 ಲಕ್ಷ ರೂ.ದರೋಡೆ

Pinterest LinkedIn Tumblr

chilli-715x350ಬೆಂಗಳೂರು, ಮೇ ೨೨- ಕಣ್ಣಿಗೆ ಖಾರದಪುಡಿ ಎರಚಿ ಸಿಗರೇಟು ವ್ಯಾಪಾರಿಯೊಬ್ಬರಿಂದ ೩ ಲಕ್ಷ ರೂ.ನಗದು ದರೋಡೆಗೈದಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಎಚ್‌ಎಎಲ್‌ನ ಯಮಲೂರುಕೋಡಿ ಬಳಿ ಈ ಘಟನೆ ನಡೆದಿದ್ದು, ಚಂದ್ರಶೇಖರ್ ಎಂಬವರು
ದರೋಡೆಗೆ ಒಳಗಾದವರು.
ಅವರು ಕಳೆದ ರಾತ್ರಿ ೮.೩೦ರ ಸುಮಾರಿಗೆ ತಮ್ಮ ಬಜಾಜ್ ಚೇತಕ್ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಹೋಗುವಾಗ ಮತ್ತೊಂದು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬೈಕ್ ನಿಲ್ಲಿಸಿ ಚಂದ್ರಶೇಖರ್ ಅವರ ಕಣ್ಣಿಗೆ ಖಾರದಪುಡಿ ಎರಚಿದ್ದಾರೆ.
ಇದರಿಂದ ಚಂದ್ರಶೇಖರ್ ತಕ್ಷಣ ಬೈಕ್‌ನಿಂದ ಕೆಳಗಿಳಿದು ಕಣ್ಣು ಒರೆಸುತ್ತಿದ್ದಂತೆ ಬ್ಯಾಗ್ ಹಾಗೂ ಅವರ ಬೈಕನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಚಂದ್ರಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.
ಬ್ಯಾಗ್‌ನಲ್ಲಿ ಮೂರು ಲಕ್ಷ ರೂ. ನಗದು ಹಾಗೂ ಇತರ ವಸ್ತುಗಳಿದ್ದವು. ಈ ಬಗ್ಗೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚಂದ್ರಶೇಖರ್ ಅವರು ಬಸವನಗರ ಕಾಲಪ್ಪ ಬಡಾವಣೆಯ ೩ನೆ ಕ್ರಾಸ್ ನಿವಾಸಿಯಾಗಿದ್ದು, ಸಿಗರೇಟು ವ್ಯಾಪಾರ ಮಾಡುತ್ತಿದ್ದರು.
ನಿನ್ನೆ ರಾತ್ರಿ ಹಣ ಸಂಗ್ರಹಿಸಿ ಮನೆಗೆ ಬರುವುದನ್ನು ಅರಿತ ದುಷ್ಕರ್ಮಿಗಳು ಈ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

Comments are closed.