ಕರ್ನಾಟಕ

ಛೇ…ಕಾಂಗ್ರೆಸ್ ಪಕ್ಷ ಎತ್ತ ಸಾಗುತ್ತಿದೆ?ಗೃಹ ಸಚಿವ ಪರಮೇಶ್ವರ್

Pinterest LinkedIn Tumblr

Parameshwarಬೆಂಗಳೂರು:ಐದು ರಾಜ್ಯಗಳ ಫಲಿತಾಂಶ ಪ್ರಕಟವಾದಾಗ ನಾ ಅಕ್ಷರಶಃ ಕಣ್ಣೀರು ಹಾಕಿದ್ದೆ. ಮುಂದಿನ ಪೀಳಿಗೆಗೆ ಕಾಂಗ್ರೆಸ್ ಬಗ್ಗೆ ಏನೆಂದು ಹೇಳಬೇಕು..ಕಾಂಗ್ರೆಸ್ ಪಕ್ಷ ಎತ್ತ ಸಾಗುತ್ತಿದೆ…ಇದು ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಬಿಜೆಪಿ ಹೊರಟಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲ ಹಾದಿಯಲ್ಲಿ ಸಾಗಿದೆ. ಹಾಗಾಗಿ ಪಕ್ಷದ ಅಧ್ಯಕ್ಷನಾಗಿ ನಾನು ಈ ಮಾತನ್ನು ಹೇಳಲೇಬೇಕಾಗಿದೆ ಎಂದರು.

ಏನೆಂದು ಹೇಳಿ ನಮ್ಮ ಪಕ್ಷವನ್ನು ಯುವಪೀಳಿಗೆಗೆ ಪರಿಚಯಿಸಬೇಕು. ಕಾಂಗ್ರೆಸ್ ಪಕ್ಷ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಗಂಭೀರವಾಗಿ ಕಾಡತೊಡಗಿದೆ ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
-ಉದಯವಾಣಿ

Comments are closed.