ಕರ್ನಾಟಕ

ಗೋಪಾಲಸ್ವಾಮಿ ಬೆಟ್ಟ; ನಟ ದರ್ಶನ್ ಕಾರು ಪ್ರವೇಶಕ್ಕೆ ನಿರ್ಬಂಧ

Pinterest LinkedIn Tumblr

Brindhavana-Film-Stills-1ಚಾಮರಾಜನಗರ: ನಟ ದರ್ಶನ್ ಹಾಗೂ ಸ್ನೇಹಿತರ ಕಾರುಗಳ ಪ್ರವೇಶಕ್ಕೆ ಅರಣ್ಯಾಧಿಕಾರಿಗಳು ನಿರಾಕರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಗೇಟ್ ನಲ್ಲಿ ನಡೆದಿದೆ.

ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದ ನಟ ದರ್ಶನ್ ಹಾಗೂ ಸ್ನೇಹಿತರಿಬ್ಬರ ಕಾರುಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರು. ಹುಲಿ ಸಂರಕ್ಷಿತ ಪ್ರದೇಶವಾಗಿದ್ದರಿಂದ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಅಲ್ಲದೇ ಮಾಲೆ ಧರಿಸಿರುವ ನಟ ದರ್ಶನ್ ಅವರಿಗೆ ಅರಣ್ಯ ಇಲಾಖೆಯ ವಾಹನದಲ್ಲಿ ಬೆಟ್ಟಕ್ಕೆ ತೆರಳಲು ಸಲಹೆ ನೀಡಿದ್ದರು. ಆದರೆ ಅರಣ್ಯಾಧಿಕಾರಿಗಳ ಸಲಹೆಯನ್ನು ಒಪ್ಪದ ದರ್ಶನ್, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳದೆ ಕೇರಳಕ್ಕೆ ಹೋಗಿರುವುದಾಗಿ ಹೇಳಿದ್ದಾರೆ.
-ಉದಯವಾಣಿ

Write A Comment