ಕರ್ನಾಟಕ

ಈಶ್ವರಪ್ಪರಿಗೆ ತಲೆ ಕೆಟ್ಟಿದ್ಯಾ… ಏಕವಚನ ರಾಜ್ಯ

Pinterest LinkedIn Tumblr

sidduಮೈಸೂರು, ಮೇ ೧೦- ಕೇಂದ್ರದಿಂದ ಬಂದ ಬರ ಪರಿಹಾರ ಹಣ ವೆಚ್ಚವಾಗಿರುವ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂಬ ಈಶ್ವರಪ್ಪ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ.
ಅವನಿಗೆ ಏನಾದ್ರೂ ತಲೆಕೆಟ್ಟಿದ್ದಿಯಾ..? ಎಂದು ಏಕವಚನದಲ್ಲಿಯೇ ಈಶ್ವರಪ್ಪ ವಿರುದ್ಧ ಪತ್ರಕರ್ತರ ಬಳಿ ಕೆಂಡಕಾರಿದರು.
ಕಳಸಾ ಬಂಡೂರಿ ಹೋರಾಟ ಇಂದಿಗೆ ಮೂನ್ನೂರನೆ ದಿನ ಕಾಲ್ಲಿಟ್ಟಿದೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಉದ್ದೇಶಕ್ಕಾಗಿ ಉತ್ತರ ಕರ್ನಾಟಕ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಕಳಸಾ ಬಂಡೂರಿ ವಿವಾದ ಇತ್ಯರ್ಥವಾಗುವುದು ಬಿಜೆಪಿಯವರಿಗೆ ಬೇಕಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದೇವೆ. ಇದಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿ, ನಾನೇ ಬರ ಪರಿಹಾರ ವೀಕ್ಷಣೆ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು. ಮಂತ್ರಿಮಂಡಲದಲ್ಲಿ ಎಲ್ಲರೂ ಸಮರ್ಥರಿದ್ದಾರೆ. ಯಾರೂ ಅಸಮರ್ಥರಿಲ್ಲ. ಸರ್ಕಾರದಲ್ಲಿ ಬದಲಾವಣೆ ತರಬೇಕಾಗಿದ್ದು, ಹೊಸಬರಿಗೆ ಅವಕಾಶ ಕಲ್ಪಿಸುವುದರಿಂದ ಮಂತ್ರಿ ಮಂಡಲ ಪುನರ್‌ ರಚನೆ ಅನಿವಾರ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಸಚಿವ ಸಂಪುಟ ಪುನರ್ ರಚನೆ ಸಂಬಂಧಿಸಿದಂತೆ ಈಗಿರುವ ಮಂತ್ರಿಗಳು ಕೂಡ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಆದರೂ ಹೊಸಬರಿಗೆ ಅವಕಾಶ ಕೊ‌ಡುವ ಸಲುವಾಗಿ ಸಚಿವ ಸಂಪುಟ ಪುನರ್ ರಚನೆ ಅವಶ್ಯಕವಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

Write A Comment