ಕರ್ನಾಟಕ

ಈ ವಾರ ತೆರೆಗೆ ಅಪ್ಪಳಿಸುತ್ತಿದೆ ‘ಗಣೇಶ್’ಗಾಗಿಯೇ ಮಾಡಿದ ಸ್ಟೈಲ್ ಕಿಂಗ್

Pinterest LinkedIn Tumblr

Style-King-Kannada

ಬೆಂಗಳೂರು: ನಟ ಗಣೇಶ್ ದ್ವಿಪಾತ್ರದಲ್ಲಿ ನಟಿಸಿರುವ ಪಿ ಸಿ ಶೇಖರ್ ನಿರ್ದೇಶನದ ‘ಸ್ಟೈಲ್ ಕಿಂಗ್’ ಒಂದು ವರ್ಷ ತಡವಾದರೂ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ನಟನಿಗೆ ಇದು ವಿಶಿಷ್ಟ ರೀತಿಯ ಸಿನೆಮಾ ಎನ್ನುವ ನಿರ್ದೇಶಕ “ನಾನು ವಿವಿಧ ಬಗೆಯ ಸಿನೆಮಾಗಳನ್ನು ಪ್ರತ್ನಿಸುತ್ತಿರುತ್ತೇನೆ. ನಾಯಕ, ರೋಮಿಯೋ, ಚಡ್ಡಿ ದೋಸ್ತ್ ಮತ್ತು ಅರ್ಜುನ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದವು” ಎನ್ನುತ್ತಾರೆ ಶೇಖರ್.

ಈ ಬಾರಿ ಕಮರ್ಷಿಯಲ್ ಸಿನೆಮಾ ಮಾಡಲು ಪ್ರಯತ್ನಿಸಿರುವುದಾಗಿ ತಿಳಿಸುವ ಶೇಖರ್ “ನಾನು ಗಣೇಶ್ ಗೆ ಬಹಳ ಹತ್ತಿರ. ಅವರು ಮಾಡಿರುವ ಎಲ್ಲ ಪಾತ್ರಗಳನ್ನು ಹತ್ತಿರದಿಂದ ಬಲ್ಲೆ ಆದುದರಿಂದ ಅವರು ದ್ವಿಪಾತ್ರದಲ್ಲಿ ಅಭಿನಯಿಸಬಲ್ಲ ಪಾತ್ರವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದ್ದೇನೆ” ಎಂದು ವಿವರಿಸುತ್ತಾರೆ.

ಈ ಪ್ರಯೋಗದ ಬಗ್ಗೆ ಆತಂಕವಿಲ್ಲವೇ ಎಂಬ ಪ್ರಶ್ನೆಗೆ “ಗಣೇಶ್ ಈಗಾಗಲೇ ಅವರ ಸತ್ವವನ್ನು ಸಾಬೀತು ಪಡಿಸಿದ್ದಾರೆ ಆದುದರಿಂದ ಕನಿಷ್ಟ ಪ್ರತಿಕ್ರಿಯೆಂತೂ ಬಂದೇ ಬರುತ್ತದೆ” ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸುತ್ತಾರೆ ಶೇಖರ್.

ನಿರ್ದೇಶಕನಾಗಿ ಅವರ ಕೌಶಲ್ಯವನ್ನು ವಿಸ್ತರಿಸಿ ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಎಳೆಯುವುದು ನನ್ನ ಕರ್ತವ್ಯ ಎಂದು ಕೂಡ ಶೇಖರ್ ಹೇಳುತ್ತಾರೆ.

ದೊಡ್ಡ ತಾರಾಗಣವಿದ್ದು ಸ್ಟೈಲ್ ಕಿಂಗ್ ಜೊತೆಗೆ ರಮ್ಯ ನಂಬೀಸನ್ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲಾ, ಸುಂದರ್ ರಾಜ್, ಪದ್ಮಾ ಮೊದಲಾದವರು ಕೂಡ ಸಿನೆಮಾದಲ್ಲಿ ನಟಿಸಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನೀಡಿದ್ದು, ರವಿವರ್ಮಾ ಸ್ಟಂಟ್ ಮಾಸ್ಟರ್ ಮತ್ತು ಸಂತೋಷ ಪಾಂಡಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Write A Comment