ಕರ್ನಾಟಕ

ಎಟಿಎಂನಲ್ಲಿ ಕುಡುಕನ ಫಜೀತಿ

Pinterest LinkedIn Tumblr

atm1ಬೆಂಗಳೂರು, ಮೇ. ೯-ಕುಡಿದ ಮತ್ತಿನಲ್ಲಿ ಹಣ ತೆಗೆಯಲು ಹೋಗಿ ಎಟಿಎಂ ಯಂತ್ರವನ್ನು ಗುದ್ದಿ ಹಾನಿಗೊಳಿಸಲು ಯತ್ನಿಸಿದ ಸೆಕ್ಯೂರಿಟಿ ಗಾರ್ಡ್‌ನೊಬ್ಬ ಪರಾರಿಯಾಗಲು ಯತ್ನಿಸಿ ವಿದ್ಯುತ್‌ಕಂಬಕ್ಕೆ ತಲೆ ಹೊಡೆದುಕೊಂಡು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಹಲಸೂರಿನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಗಾಯಗೊಂಡಿರುವ ಡೆಲ್ ಕಂಪನಿಯ ಸೆಕ್ಯೂರಿಟಿ ಗಾರ್ಡ್ ರಾಜೀವ್ ದೇಬ್‌ನಾಥ್ ಹಾಸ್‌ಮ್ಯಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಂಠಮೂರ್ತಿ ಪೂರ್ತಿ ಕುಡಿದಿದ್ದ ರಾಜೀವ್ ದೇಬ್‌ನಾಥ್ ರಾತ್ರಿ ೨ರ ವೇಳೆ ಹಲಸೂರಿನ ನೂರು ಅಡಿ ರಸ್ತೆಯ ಡೆಲ್‌ಕಂಪನಿಯ ಮುಂಭಾಗ ವಿರುವ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಹಣ ತೆಗೆಯಲು ಬಂದಿದ್ದಾನೆ.
ಕಾರ್ಡ್ ಸರಿಯಾಗಿ ಹಾಕದಿದ್ದರಿಂದ ಯಂತ್ರದೊಳಗೆ ಸಿಕ್ಕಿ ಹಾಕಿಕೊಂಡಿದ್ದು ಅದನ್ನು ತೆಗೆಯಲು ಯಂತ್ರವನ್ನು ಕೈಯಿಂದ ಹೊಡೆಯಲು ಯತ್ನಿಸಿದ್ದಾನೆ ಇದನ್ನು ನೋಡಿದ ಎಟಿಎಂ ಕೇಂದ್ರದ ಸೆಕ್ಯೂರಿಟಿ ಗಾರ್ಡ್ ಅಬ್ದುಲ್ ಕಲಾಂ ಅವರು ತಡೆಯಲು ಹೋದಾಗ ತಪ್ಪಿಸಿಕೊಂಡು ಓಡಿದ್ದಾನೆ.
ಹಿಂದಿನಿಂದ ಆತನನ್ನು ಕಲಾಂ ಅವರು ಹಿಡಿಯಲು ಬಂದಾಗ ಹಿಂದೆ ನೋಡುತ್ತಾ ಓಡಿದ ರಾಜೀವ್ ದೇಬ್‌ನಾಥ್ ವಿದ್ಯುತ್‌ಕಂಬಕ್ಕೆ ತಲೆ ಹೊಡೆದುಕೊಂಡು ಗಂಭೀರವಾಗಿ ಗಾಯಗೊಂಡು ಕೆಳಗೆ ಬಿದ್ದಿದ್ದಾನೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹಲಸೂರು ಪೊಲೀಸರು ರಾಜೀವ್ ದೇಬ್‌ನಾಥ್‌ನನ್ನು ಹಾಸ್‌ಮ್ಯಾಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡಿಸಿಪಿ ಸತೀಶ್‌ಕುಮಾರ್ ತಿಳಿಸಿದ್ದಾರೆ.

Write A Comment