ಕರ್ನಾಟಕ

ಸಕಾಲಕ್ಕೆ ಸಿಗದ ಚಿಕಿತ್ಸೆ- ವಿದ್ಯಾರ್ಥಿನಿ ಸಾವು

Pinterest LinkedIn Tumblr

studentclrವಿಜಯಪುರ, ಮೇ ೬- ಹೊಟ್ಟೆನೋವು ಹಾಗೂ ರಕ್ತದೊತ್ತಡ ಕುಸಿತದಿಂದ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ಸಿಗದ ಕಾರಣ ಆಕೆ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಮಹಿಳಾ ವಿವಿಯ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಬಾವಿಕಟ್ಟೆ (21) ಹೊಟ್ಟೆನೋವಿನಿಂದ ಸಾವನ್ನಪ್ಪಿದ್ದಾಳೆ. ತಡರಾತ್ರಿ ವಿಜಯಲಕ್ಷ್ಮಿ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರಿಂದ ವಿದ್ಯಾರ್ಥಿನಿಯರು ವಿವಿಯ ಅಂಬುಲ್ಯೆನ್ಸ್ ವಿಭಾಗಕ್ಕೆ ಸಾಕಷ್ಟು ಬಾರಿ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ವಾಹನ ಚಾಲಕ 1 ಗಂಟೆ ತಡವಾಗಿ ಬಂದಿದ್ದಾನೆ.
ತಕ್ಷಣ ವಿಜಯಲಕ್ಷ್ಮಿ ಸ್ನೇಹಿತರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಗದಗ ಮೂಲದ ವಿಜಯಲಕ್ಷ್ಮಿ ದ್ವಿತೀಯ ಎಂಎಸ್‌ಸಿಯಲ್ಲಿ ಪ್ರಾಣಿಶಾಸ್ತ್ರ ಅಧ್ಯಯನ ಮಾಡುತ್ತಿದ್ದಳು.
ವಿಜಯಲಕ್ಷ್ಮಿ ಸಾವಿನಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ವಿವಿಯ ಆವರಣದಲ್ಲಿಂದು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ ಎಬಿವಿಪಿ ಕೂಡ ಸಾಥ್ ನೀಡಿದೆ.

Write A Comment