ಕರ್ನಾಟಕ

ಹುಡುಗಿಯೆಂದು ಪ್ರೀತಿಸಿದ ಯುವಕ ..ಮಂಗಳಮುಖಿ ಎಂದು ಗೊತ್ತಾದಾಗ ದೂರವಾದ …ಕೊನೆಗೆ ಆಕೆಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಶರಣಾದ

Pinterest LinkedIn Tumblr

viliam

ಬೆಂಗಳೂರು: ಮಂಗಳಮುಖಿಯರ ಕಾಟಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿಲಿಯಂ ಆತ್ಮಹತ್ಯೆ ಮಾಡಿಕೊಂಡ ಯುವಕ. ಆನ್‍ಲೈನ್ ಶಾಪಿಂಗ್ ತಾಣ ಒಂದರಲ್ಲಿ ಡೆಲಿವರಿ ಬಾಯ್ ಆಗಿದ್ದ ಆತ ಒಂದು ಹುಡುಗಿಯನ್ನು ಪ್ರೀತಿ ಮಾಡಿದ್ದ. ಹುಡುಗಿ ಸಹ ಆತನನ್ನು ಪ್ರೀತಿ ಮಾಡುತ್ತಿದ್ದಳು

ಒಂದು ದಿನ ಪ್ರೀತಿಗಾಗಿ ಗೆಳೆಯ ಆಕೆ ಸರ್ವವನ್ನು ಒಪ್ಪಿಸುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದಳು. ಅವಳ ಅಣತಿಯಂತೆ ಮನೆಗೆ ಲೈಂಗಿಕ ಕ್ರಿಯೆಗೆಂದು ಹೋದವನಿಗೆ ಹೋದವನಿಗೆ ತಾನು ಪ್ರೀತಿ ಮಾಡುತ್ತಿರುವವಳು ಹುಡುಗಿಯಲ್ಲ, ಮಂಗಳಮುಖಿ ಎನ್ನುವುದು ಗೊತ್ತಾಗಿದೆ.

ಮಂಗಳಮುಖಿ ಎಂದು ಗೊತ್ತಾದ ಬಳಿಕ ಅಲ್ಲಿಂದ ನಿರ್ಗಮಿಸಲು ಹೊದ ವಿಲಿಯಂನನ್ನು ತಡೆದ ಮಂಗಳಮುಖಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದಾದ ಬಳಿಕವೂ ಮೂರು ಬಾರಿ ಲೈಂಗಿಕ ಕ್ರಿಯೆ ನಡೆದಿದೆ.

ಇಷ್ಟೆಲ್ಲ ಆದ ಬಳಿಕ ಮಂಗಳಮುಖಿ ಹುಡುಗನ ಜೊತೆ ಮದುವೆಯಾಬೇಕು ಎಂದು ದುಂಬಾಲು ಬಿದ್ದಿದ್ದಾಳೆ. ಆದರೆ ವಿಲಿಯಂ ಮದುವೆಯಾಗಲು ಒಪ್ಪಿಗೆ ನೀಡಲಿಲ್ಲ. ಕೊನೆಗೆ ವಿಲಿಯಂ ಮನೆಯ ಮುಂದೆ ಬಂದು ಮದುವೆಯಾಗಬೇಕೆಂದು ಮಂಗಳಮುಖಿಯರು ಪ್ರತಿಭಟನೆ ನಡೆಸಿದ್ದಾರೆ.

ಇವರ ಪ್ರತಿಭಟನೆಯಿಂದ ರೋಸಿ ಹೋಗಿದ್ದ ವಿಲಿಯಂ ಮನೆ ಬಿಟ್ಟು ಓಡಿ ಹೋಗಿದ್ದ. ಈ ವೇಳೆ ಮತ್ತೊಮ್ಮೆ ಮನೆಗೆ ಬಂದಿದ್ದ ಮಂಗಳಮುಖಿಯರು ವಿಲಿಯಂ ನಾಪತ್ತೆಯಾಗಿದ್ದಾನೆ ಎಂದು ಕರ ಪತ್ರ ಹಂಚಿದ್ದರು. ಈ ವಿಚಾರ ಗೊತ್ತಾಗಿ ಮಂಗಳವಾರ ಭೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಸಮೀಪ ರೈಲಿಗೆ ತಲೆಕೊಟ್ಟು ವಿಲಿಯಂ ಆತ್ಮಹತ್ಯೆ ಮಾಡಿಕೊಂಡಿದ್ದು, ಭೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment