ಕರ್ನಾಟಕ

ಆರ್‌ಟಿಇ ದುರ್ಬಳಕೆ ಬಿಇಓ ಪ್ರಕಾಶ್ ವಿಚಾರಣೆ

Pinterest LinkedIn Tumblr

RTE

ಬೆಂಗಳೂರು,ಮೇ.೫-ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯಡಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ನೀಡುವ ಅನುದಾನದಲ್ಲಿ ಲಕ್ಷಾಂತರ ರೂಗಳ ದುರುಪಯೋಗ ನಡೆಸಿರುವ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಓ) ಕೆ.ಪ್ರಕಾಶ್ ಅವರನ್ನು ಶಂಕರಪುರಂ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬೆಂಗಳೂರು ದಕ್ಷಿಣವಲಯ ೧ರ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಅವರು ಆರ್‌ಟಿಇ ಅಡಿ ಖಾಸಗಿ ಶಾಲೆಗಳಿಗೆ ದಾಖಲಾಗುವ ಮಕ್ಕಳಿಗೆ ನೀಡುವ ಅನುಧಾನದಲ್ಲಿ ೯೨ ಲಕ್ಷ ರೂಗಳನ್ನು ದುರುಪಯೋಗ ಮಾಡಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಡಿಡಿಪಿಐ ಪದ್ಮಾವತಿ ಅವರು ಶಂಕರಪುರಂ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಶಂಕರಪುರಂ ಪೊಲೀಸರು ಪ್ರಕಾಶ್ ಅವರಿಗೆ ನೊಟೀಸ್ ನೀಡಿ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ಲೋಕೇಶ್‌ಕುಮಾರ್ ತಿಳಿಸಿದ್ದಾರೆ.

Write A Comment