ಕರ್ನಾಟಕ

63 ಸಾವಿರ ರೂ. ಕದ್ದರೆಂದು ಶಂಕಿಸಿ ಕಾರ್ಮಿಕರಿಗೆ ಛಡಿ ಏಟು ಮತ್ತು ಗೃಹ ಬಂಧನ

Pinterest LinkedIn Tumblr

lashesತುರುವೇಕೆರೆ, ಮೇ 4-ಕಾರ್ಮಿಕ ದಿನಾಚರಣೆಯ ಸಂಭ್ರಮ ಹಸಿಯಾಗಿರುವಾಗಲೇ, ಮನೆ ನವೀಕರಣಕ್ಕೆಂದು ತೆರಳಿದ್ದ ಮೂವರು ಕಾರ್ಮಿಕರನ್ನು ಗೃಹಬಂಧನಕ್ಕೊಳಪಡಿಸಿ, ದೈಹಿಕವಾಗಿ ಹಲ್ಲೆ ನಡೆಸಿ ಮಾನಸಿಕವಾಗಿ ಘಾಸಿಗೊಳಿಸಿರುವ ಅಮಾನವೀಯ ಘಟನೆ ತಾಲೂಕಿನ ದಂಡಿನಶಿವರ ಠಾಣಾವ್ಯಾಪ್ತಿಯ ಅಂಗರೇಖನಹಳ್ಳಿಯಲ್ಲಿ ನೆಡೆದಿದೆ. ದಂಡಿನಶಿವರ ಹೋಬಳಿ ಕುರುಬರಹಳ್ಳಿ ಕೊಪ್ಪ ಗ್ರಾಮದ ನರಸಿಂಹಯ್ಯ. ಮನು, ನಾಗೇಶ್ ಹಲ್ಲೆಗೊಳಗಾದವರು. ನರಸಿಂಹಯ್ಯನಿಗೆ ಕಿಡ್ನಿಂiiಲ್ಲಿ ಕಲ್ಲು ಸೇರಿಕೊಂಡು ಹದಿನೈದು ದಿನಗಳ ಹಿಂದೆಯಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹಲ್ಲೆಯಿಂದಾಗಿ ಇನ್ನಷ್ಟು ಅಸ್ವಸ್ಥನಾಗಿದ್ದರಿಂದ ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ:
ಇದೇ ಗ್ರಾಮದ ಮಹದೇವಪ್ಪ ಎಂಬುವರ ಮನೆಯ ನವೀಕರಣದ ಗುತ್ತಿಗೆಯನ್ನು ರಾಜು ಎಂಬಾತ ಪಡೆದಿದ್ದ. ಮನೆಯ ಟೈಲ್ಸ್‌ಗೆ ಪಾಲಿಶ್ ಕೆಲಸ ಬಾಕಿ ಉಳಿದಿತ್ತು. ಅದಕ್ಕಾಗಿ ಕೊಪ್ಪ ಗ್ರಾಮದ ನರಸಿಂಹಯ್ಯ, ಮನು ಹಾಗೂ ನಾಗರಾಜು ಎಂಬವವರಿಗೆ ಕೆಲಸ ನಿರ್ವಹಿಸುವಂತೆ ಕಳುಹಿಸಿಕೊಟ್ಟಿದ್ದ. ಅದರಂತೆ ಈ ಮೂವರು ಕೆಲಸ ಮಾಡುತ್ತಿದ್ದ ವೇಳೆ ಅದು ಹೇಗೋ 63ಸಾವಿರ ರೂ. ಕಳ್ಳತನವಾಗಿತ್ತು. ಮನೆಯವರು ತಗಾದೆ ತೆಗೆದು ಇವರೇ ಆ ಹಣ ಕದ್ದಿದ್ದಾರೆಂದು ಆರೋಪಿಸಿ ಅವರು ಕಳ್ಳತನ ಮಾಡದಿದ್ದರೂ ಆದರ್ಶ ಹಾಗೂ ಸಹಚರರು ಮರದ ಪಟ್ಟಿಗಳಲ್ಲಿ ಹಿಗ್ಗಾ – ಮುಗ್ಗಾ ಹೊಡೆದು ಬೆಳಗಿನ ವರೆಗೆ ಕೂಡಿಹಾಕಿದ್ದರು ಎಂದು ಪೆಟ್ಟು ತಿಂದ ಕೂಲಿ ಕಾರ್ಮಿಕರು ದೂರಿದ್ದಾರೆ.

ಈ ಸಂಬಂಧ ದಂಡಿನಶಿವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆಯನ್ನು ತಾಲ್ಲೂಕು ಡಿಎಸ್‌ಎಸ್ ಪದಾಧಿಕಾರಿಗಳು ಖಂಡಿಸಿದ್ದು, ಪೋಲಿಸ್ ಠಾಣೆಗೆ ಆಗಮಿಸಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಗ್ರಾಮಸ್ಥರಾದ ಕುಮಾರ್, ಬೀಚನಹಳ್ಳಿ ರಾಮಣ್ಣ, ಡಾ|ಚಂದ್ರಯ್ಯ. ರೋಹಿತ್, ಲಕ್ಷ್ಮೀಶ್, ರಂಗಸ್ವಾಮಿ, ಸತೀಶ್, ರಾಜು, ಹಾಗೂ ಕೊಪ್ಪಒತ್ತಾಯಿಸಿದ್ದಾರೆ.

Write A Comment