ಕರ್ನಾಟಕ

ಕರ್ನಾಟಕದ ಪ್ರವಾಸಿಗರಿಗೆ ಆಸ್ಟ್ರೇಲಿಯಾ ಅಚ್ಚು ಮೆಚ್ಚಿನ ಪ್ರವಾಸಿ ತಾಣ

Pinterest LinkedIn Tumblr

karಬೆಂಗಳೂರು, ಮೇ 4- ಇತ್ತೀಚಿನ ದಿನಗಳಲ್ಲಿ ಕರ್ನಾಟಕದಿಂದ ವಿದೇಶಗಳಿಗೆ ಪ್ರವಾಸ ಮಾಡುವ ಪ್ರವಾಸಿಗರ ಪೈಕಿ ಆಸ್ಟ್ರೇಲಿಯಾ ಅತ್ಯಂತ ಅಚ್ಚುಮೆಚ್ಚಿನ ತಾಣವಾಗಿದೆ. ಇದರಿಂದ ಆಸ್ಟ್ರೇಲಿಯಾದ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕರ್ನಾಟಕ ರಾಜ್ಯ ಆಸ್ಟ್ರೇಲಿಯಾಗೆ ಮೂರನೆ ಅತಿ ದೊಡ್ಡ ಪ್ರವಾಸೋದ್ಯಮ ಅಭಿವೃದ್ಧಿಯ ಮೂಲವಾಗಿ ರೂಪುಗೊಂಡಿದೆ. ಮಹಾರಾಷ್ಟ್ರ ಹಾಗೂ ನವದೆಹಲಿಗಳು ಮೊದಲೆರಡು ಸ್ಥಾನಗಳಲ್ಲಿವೆ. 2015ರ ಮಾರ್ಚ್ ತಿಂಗಳ ಅಂತ್ಯಕ್ಕೆ ಒಟ್ಟಾರೆ ಪ್ರವಾಸಿಗರ ಆಗಮನದ ಪ್ರಮಾಣ ಶೇ.20ರಷ್ಟು ಹೆಚ್ಚಾಗಿದ್ದು, ಶೇ.44ರಷ್ಟು ಜನರು ಆಸ್ಟ್ರೇಲಿಯಾ ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಲಿಷ್ಠ ಬೆಳವಣಿಗೆಯಿಂದಾಗಿ ಬೆಂಗಳೂರು ನಗರ, ಆಸ್ಟ್ರೇಲಿಯಾದ ಪ್ರಾಥಮಿಕ ಗುರಿ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.

ಪ್ರದೇಶದಲ್ಲಿರುವ ಪ್ರತಿಷ್ಠಿತ ಪ್ರಯಾಣದ ಏಜೆನ್ಸಿಗಳ ಉಪಸ್ಥಿತಿ, ಆಸ್ಟ್ರೇಲಿಯಾಗೆ ಪ್ರಯಾಣಿಸುವವರ ಸಂಖ್ಯೆಗೆ ಪುರಾವೆಯಾಗಿದೆ ಹಾಗೂ ಹೆಚ್ಚಿನ ಜನರು ತಮ್ಮ ರಜ ದಿನಗಳನ್ನು ಆಸ್ಟ್ರೇಲಿಯಾದಲ್ಲಿ ಕಳೆಯಲು ಬಯಸುತ್ತಿರುವುದು ಗೋಚರಿಸುತ್ತಿದೆ. ಬೆಂಗಳೂರಿನ ಸ್ಯಾಲಿಸ್ ಹಾಲಿಡೇನ ಎಂಡಿ ಸುಪ್ರಿಯಾ ಕಂಢರಿ ಅವರು, ಕಾಸ್ಮೊಪಾಲಿಟನ್ ಬೆಂಗಳೂರಿಗರು ಹೆಚ್ಚು ಚಟುವಟಿಕೆ ಆಧಾರಿತ ರಜೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸಾಹಸ ಆಧಾರಿತ ಮಾರ್ಗದರ್ಶಕಗಳು ಆಸ್ಟ್ರೇಲಿಯಾದ ಜನಪ್ರಿಯತೆ ಹೆಚ್ಚುಗೊಳಿಸುತ್ತಿದೆ ಎಂದರು.

ನಾವು ಆಸ್ಟ್ರೇಲಿಯಾಗೆ ಮಧುಚಂದ್ರಕ್ಕೆ ಹೋಗುವವರ ಸಂಖ್ಯೆ ಹಾಗೂ ಯುವ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿರುವುದನ್ನು ಗಮನಿಸಿದ್ದೇವೆ ಎಂದು ವಿವರಿಸಿದರು. ಶರತ್ ಧಲ್ ಮಾತನಾಡಿ, ಕಳೆದ ಆರು ತಿಂಗಳಲ್ಲಿ ನಾವು ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಪ್ರವಾಸ ಹೋಗುವ ವಿಚಾರಣೆಗಳಲ್ಲಿ ಶೇ.133ರಷ್ಟು ಹೆಚ್ಚಳವನ್ನು ದಾಖಲಿಸಿದ್ದೇವೆ. ಆಸ್ಟ್ರೇಲಿಯಾದ ವೈವಿಧ್ಯತೆ ಹಾಗೂ ಎಲ್ಲ ವಯಸ್ಸಿನ ಜನರ ಆಸಕ್ತಿಗಳನ್ನೂ ಪೂರೈಸುವ ಸಾಮರ್ಥ್ಯವೇ ಜನರಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಕಾರಣ ಎಂದರು.

ಬೆಂಗಳೂರಿನ ಟ್ರಾವೆಲ್ ಟೂರ‌ಸ್ಮರನ ಶ್ರೀಕಾಂತ್ ಮಾತನಾಡಿ, ವೈವಿಧ್ಯತೆ ಹಾಗೂ ವಿವಿಧ ಉತ್ಪನ್ನ ಕೊಡುಗೆಗಳಿಂದಾಗಿ ಆಸ್ಟ್ರೇಲಿಯಾ ಎಲ್ಲಾ ವರ್ಗಗಳ ಪ್ರವಾಸಿಗರನ್ನೂ ಆಕರ್ಷಿಸುತ್ತದೆ ಹಾಗೂ ಎಲ್ಲರ ಆದ್ಯತೆಯ ಪ್ರವಾಸಿ ತಾಣವಾಗಿದೆ. ಬೆಂಗಳೂರಿನಿಂದ, ಆಸ್ಟ್ರೇಲಿಯಾದಲ್ಲಿ ಐಟಿ ಕೆಲಸಗಳಲ್ಲಿರುವಂತಹ ತಮ್ಮ ಸ್ನೇಹಿತರನ್ನು ಹಾಗೂ ಸಂಬಂಧಿಕರನ್ನು ನೋಡಲು ತೆರಳುವಂತಹವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಒಟ್ಟಾರೆ ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಪ್ರವಾಸ ಹೋಗುವವರ ಸಂಖ್ಯೆಯಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

Write A Comment