ಕರ್ನಾಟಕ

ಕೋಲಾರಕ್ಕೆ ಸಿಎಂ ಬಂದ್ರು ಹೋದ್ರು : ಕಾಟಾಚಾರದ ಬರ ಅಧ್ಯಯನ

Pinterest LinkedIn Tumblr

Sidduಕೋಲಾರ, ಮೇ.೩- ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಇಂದು ಕೋಲಾದ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿನ ನಾನಾ ಗ್ರಾಮಗಳಲ್ಲಿ ಬರ ಕುರಿತು ಪರಿಶೀಲನೆ ನಡೆಸಿದರು.
ರಾಜ್ಯದ ಮೂರನೇ ಹಂತದ ಬರ ಪ್ರವಾಸ ಕೈಗೊಂಡಿರುವ ಅವರು ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ,ಕಲ್ಕೆರೆ, ಸುಗಟೂರು, ಕಳ್ಳಿಪುರ ಗ್ರಾಮಗಳಿಗೆ ಭೇಟಿ ಬರ ಪರಿಸ್ಥಿತಿ ಅಧ್ಯಯನ ಹಾಗೂ ಎನ್.ಆರ್.ಇ.ಜಿ.ಎ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಬರ ಪರಿಸ್ಥಿತಿ ಅಧ್ಯಯನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಕೆ.ಎಚ್.ಮುನಿಯಪ್ಪ, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಜೊತರಗಿದ್ದರು.

ಅಹವಾಲು ಆಲಿಸಿದ ಸಿದ್ದು
ಇದೇ ಸಂದರ್ಭದಲ್ಲಿ ತಾಲೂಕಿನ ದೊಡ್ಡವಲ್ಲಬ್ಬಿಯಲ್ಲಿ ಗ್ರಾಮಸ್ಥರಿಂದ ಅಹವಾಲು ಆಲಿಸಿದ ಸಿದ್ದರಾಮಯ್ಯ ಅವರು ಗ್ರಾಮದ ಸಮಸ್ಯೆಗೆ ಪರಿಹಾರ ಒದಗಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು, ಹಾಗೂ ಗ್ರಾಮಸ್ಥರಿಂದ ಕುಡಿಯುವ ನೀರಿನ ಸಮಸ್ಯೆ ಕುರಿತ ಮನವಿ ಸ್ವೀಕರಿಸಿದರು.
ಜನರ ಆಕ್ರೋಶ
ಕೇವಲ ೯ ನಿಮಿಷದಲ್ಲಿ ಕೋಲಾರದ ದೊಡ್ಡವಲ್ಲಬ್ಬಿ , ಕಲ್ಕೆರೆಯಲ್ಲಿ ಬರ ಪ್ರವಾಸ ಮುಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಶಾಪ ಹಾಕಿದರು.

Write A Comment