ಕರ್ನಾಟಕ

ಖರ್ಗೆ ಬೆಂಬಲಿಗರ ಆಯ್ಕೆ; ಸಚಿವ ಚಿಂಚನಸೂರ್ ಮೇಲೆ ಹಲ್ಲೆಗೆ ಯತ್ನ

Pinterest LinkedIn Tumblr

Baburao_chinsansuruಯಾದಗಿರಿ:ಸಂಸದ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಬಲಿತರನ್ನು ಯಾದಗಿರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಶಾಸಕ ಮಾಲಕರೆಡ್ಡಿ ಕಾರಿನ ಮೇಲೆ ಕುರ್ಚಿಯನ್ನು ಎಸೆದು ಹಲ್ಲೆ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.

ಯಾದಗಿರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನೊಳಗೆ ಭಿನ್ನಮತ ಸ್ಫೋಟಗೊಂಡಿದ್ದು, ಯಾದಗಿರಿ ಕಾಂಗ್ರೆಸ್ ಕಚೇರಿ ಆವರಣ ರಣಾಂಗಣವಾಗಿತ್ತು. ಕಚೇರಿ ಆವರಣದಲ್ಲಿ ಸಚಿವ ಚಿಂಚನಸೂರ್, ಮಾಲಕರೆಡ್ಡಿ ಕಾರಿಗೆ ಕೈ ಕಾರ್ಯಕರ್ತರು ಮುತ್ತಿಗೆ ಹಾಕಿ, ಹಲ್ಲೆ ನಡೆಸಲು ಮುಂದಾಗಿದ್ದರು.

ಖರ್ಗೆ ಬೆಂಬಲಿತರನ್ನು ಆಯ್ಕೆ ಮಾಡಿದ್ದಾರೆಂದು ಚಿಂಚನಸೂರ್ ಹಾಗೂ ಮಾಲಕರೆಡ್ಡಿ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪ್ಲಾಸ್ಟಿಕ್ ಕುರ್ಚಿಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಸೆದಿದ್ದರು. ಇದರಿಂದಾಗಿ ಸಚಿವ ಚಿಂಚನಸೂರ್, ಮಾಲಕರೆಡ್ಡಿ ಬಿಗಿಭದ್ರತೆಯಲ್ಲಿ ಸ್ಥಳದಿಂದ ನಿರ್ಗಮಿಸಿದ್ದರು.
-ಉದಯವಾಣಿ

Write A Comment