ಕರ್ನಾಟಕ

ವರ್ಣರಂಜಿತವಾಗಿ ಜರುಗಿದ ಕನ್ನಡ ಪಾಠ ಶಾಲೆ ದುಬೈ ನ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗು ಪ್ರಮಾಣ ಪತ್ರ ವಿತರಣಾ ಸಮಾರಂಭ

Pinterest LinkedIn Tumblr

kannada paata shaale dubai_Aprl 30-2016-DSC_7058

ದುಬೈ : ಕನ್ನಡಮಿತ್ರರು ಯು.ಎ.ಇ ಇವರು 2 ವರ್ಷಗಳಿಂದ ಕನ್ನಡ ಭಾಷಾ ತರಗತಿಗಳನ್ನು ಉಚಿತವಾಗಿ ನಡೆಸುತ್ತಿದ್ದು, 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ದುಬೈ ನ ಜೆ.ಎಸ್.ಎಸ್ ಇಂಟೆರ್ ನ್ಯಾಶನಲ್ ಸ್ಕೂಲ್ , ಅಲ್ ಬರ್ಶಾ ದಲ್ಲಿ ವರ್ಣರಂಜಿತವಾಗಿ ನೆರವೇರಿತು.

ಸಂಜೆ 6:20ಕ್ಕೆ ಪ್ರಾರಂಭವಾದ ಕಾರ್ಯಕ್ರಮ ವಿವಿಧ ವಿಸೇಶತೆಗಳಿಂದ ರಸವತ್ತಾಗಿ ಸಾಗಿತು, ಕನ್ನಡ ಪಾಠ ಶಾಲೆಯ ವಿಧ್ಯಾರ್ಥಿಗಳಾದ ಕುಮಾರಿ ಶಮಾ ಸಂಕೋಳೆ ಮತ್ತು ಕುಮಾರ ಪ್ರತ್ಯುಶ್ ನಾಜರಜ್ ರಾವ್ ಕರ್ಯಕ್ರಮದ ಪ್ರಮುಖ ನಿರೂಪಣೆಯನ್ನು ಶುದ್ಧ ಕನ್ನಡ ಭಾಷೆಯಲ್ಲಿ ನೆರವೇರಿಸಿದರೆ, ಆರಂಭ ಹಾಗು ಅಂತ್ಯದಲ್ಲಿ ನಿರೂಪಣೆಯನ್ನು ಶ್ರೀಮತಿ ಶ್ವೇತಾ ನಾಡಿಗ್ ಶರ್ಮಾ ಹಾಗು ಸತೀಶ್ ಹೆಗ್ಡೆ ಅಚ್ಹುಕಟ್ಟಾಗಿ ನಡೆಸಿಕೊಟ್ಟರು, ಶ್ರೀ ಚಂದ್ರಶೇಖರ್ ಸಂಕೋಳೆ ರವರು ಅತಿಥಿಗಳಿಗೆ ಹೂಗುಚ್ಹ ನೀಡಿ ವೇದಿಕೆಗೆ ಬರಮಾಡಿಕೊಂಡರು.

kannada paata shaale dubai_Aprl 30-2016-DSC_6855

kannada paata shaale dubai_Aprl 30-2016-DSC_6864

kannada paata shaale dubai_Aprl 30-2016-DSC_6866

kannada paata shaale dubai_Aprl 30-2016-DSC_6868

kannada paata shaale dubai_Aprl 30-2016-DSC_6872

kannada paata shaale dubai_Aprl 30-2016-DSC_6880

kannada paata shaale dubai_Aprl 30-2016-DSC_6881

kannada paata shaale dubai_Aprl 30-2016-DSC_6887

kannada paata shaale dubai_Aprl 30-2016-DSC_6894

kannada paata shaale dubai_Aprl 30-2016-DSC_6897

kannada paata shaale dubai_Aprl 30-2016-DSC_6900

kannada paata shaale dubai_Aprl 30-2016-DSC_6904

ಕಾರ್ಯಕ್ರಮದ ಉದ್ಘಾಟನೆಯನ್ನು , ಕನ್ನಡ ಮಿತ್ರರು ಸಂಘಟನೆಯ ಅಧ್ಯಕ್ಷ ಶ್ರೀ . ಶಶಿಧರ್ ನಾಜರಜಪ್ಪ , ರೇಡಿಯೂ ಸ್ಪೈಸ್ ಆಕಾಶ ವಾಣಿ ಚಾನಲ್ ನ ಶ್ರೀ ಅರ್ಮನ್ ಲೂಯಿಸ್ , ಎ.ಬಿ.ಬಿ ಸಂಸ್ಥೆಯ ಶ್ರೀ ಮೋಹನ್ ನರಸಿಂಹ ಮೂರ್ತಿ , ಎಕೋಸ್ಟಾರ್ ಟೆಕ್ನಿಕಲ್ ಸರ್ವೀಸಸ್ ನ ನಿರ್ದೇಶಕ ಶ್ರೀ ಸಿದ್ದಲಿಂಗೇಶ್ ಬಿ.ಆರ್ ರವರು ನೆರವೇರಿಸಿದರು, ಶ್ರೀ ಸುನೀಲ್ ಗವಾಸ್ಕರ್ ಅತಿಥಿಗಳನ್ನು ಸ್ವಾಗತಿಸಿದರು.

ಕನ್ನಡ ಪಾಠ ಶಾಲೆಯ ಬಗ್ಗೆ ವಿವರಿಸುತ್ತಾ ಶಶಿಧರ್ ನಾಗರಜಪ್ಪ ತಾವು ಮತ್ತು ತಮ್ಮ ಮಿತ್ರರು ಕನ್ನಡ ಸಾಕ್ಷರತೆಗಾಗಿ ಪಟ್ಟ ಶ್ರಮ ಮತ್ತು ಶಾಲೆಯ ಯಶಸ್ಸಿನಬಗ್ಗೆ ಸಭಿಕರಿಗೆ ತಿಳಿಸಿದರು, ವಿಸೇಶ ಅತಿಥಿ ಶ್ರೀ ಅರ್ಮನ್ ಲೂಯಿಸ್ ರವರು ಮತನಾಡುತ್ತಾ ಕನ್ನಡಭಾಷೆಯ ಸಾಕ್ಷರತೆ ಅನಿವಾಸಿಭಾರತೀಯರಿಗೆ ಅತ್ಯಗತ್ಯವೆಂದು ಮನದಟ್ಟುಮಾಡಿಕೊಟ್ಟರು , ಮುಖ್ಯ ಅಥಿಥಿ ಡಾ. ಶಿವಕುಮಾರ್ ಡಿ ಪಿ ರವರು ಅರ್ಥಬದ್ದವಾದ ಉದಾಹರಣೆಯ ಮೂಲಕ ಕನ್ನಡ ಭಾಷೆಯನ್ನು ಪ್ರತಿನಿತ್ಯ ಹಾಗು ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ಕರೆಕೊಟ್ಟರು, ಶ್ರೀ ಮೋಹನ್ ನರಸಿಂಹಮೂರ್ತಿ ಯವರು ಮಾತನಾಡಿ ಕನ್ನಡ ಮಿತ್ರರು ಸಂಘಟನೆಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು ಹಾಗು ಶ್ರೀಮತಿ ಡಾ.ರಶ್ಮಿ ನಂದಕಿಶೋರ್ ರವರು ಮಾತನಾಡಿ ಕನ್ನಡ ಪಾಠ ಶಾಲೆಯ ಮುಂದಿನ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

kannada paata shaale dubai_Aprl 30-2016-DSC_6907

kannada paata shaale dubai_Aprl 30-2016-DSC_6921

kannada paata shaale dubai_Aprl 30-2016-DSC_6932

kannada paata shaale dubai_Aprl 30-2016-DSC_6952

kannada paata shaale dubai_Aprl 30-2016-DSC_6957

kannada paata shaale dubai_Aprl 30-2016-DSC_6968

kannada paata shaale dubai_Aprl 30-2016-DSC_6972

kannada paata shaale dubai_Aprl 30-2016-DSC_6976

kannada paata shaale dubai_Aprl 30-2016-DSC_6985

kannada paata shaale dubai_Aprl 30-2016-DSC_6992

kannada paata shaale dubai_Aprl 30-2016-DSC_7011

kannada paata shaale dubai_Aprl 30-2016-DSC_7013

kannada paata shaale dubai_Aprl 30-2016-DSC_7017

kannada paata shaale dubai_Aprl 30-2016-DSC_7021

kannada paata shaale dubai_Aprl 30-2016-DSC_7022

kannada paata shaale dubai_Aprl 30-2016-DSC_7023

ಕನ್ನಡ ಪಾಠ ಶಾಲೆಯಲ್ಲಿ 2016 ಸಾಲಿನಲ್ಲಿ ಉತ್ತೀರ್ಣರಾದ ಎಲ್ಲಾ 56 ವಿಧ್ಯಾರ್ಥಿಗಳಿಗು , ಪ್ರಮಾಣ ಪತ್ರ ಹಾಗು ಪದಕಗಳನ್ನು ನೀಡಿದರೆ , ಮಕ್ಕಳಿಗೆ ಆರು ತಿಂಗಳ ಕಾಲ ಬೊದನೆ ಮಾಡಿದ ಶಿಲ್ಪಾ ಸಿದ್ದಲಿಂಗೇಶ್, ಶ್ವೆತಾ ನಾಡಿಗ್, ರೂಪಾ ಶಶಿಧರ್, ಕಾವ್ಯ ಯುವರಾಜ್, ವನೀತಾ ಚಂದ್ರಶೇಖರ್, ಮೀರಾ ವಿನೀತ್, ಕಾಮಾಕ್ಷಿ ಸುರೇಶ್, ರಕ್ಷಿತಾ ಗಣವರಿ, ಮಮತಾ ಕೋಟಿಯನ್ ರವರಿಗೆ ಪೊಷಕರು ಗುರುಕಾಣಿಕೆಯಾಗಿ ಚಿನ್ನದ ನಾಣ್ಯ ಅರ್ಪಿಸಿದರೆ , ದೇವೂ ಎಲೆಕ್ಟ್ರಾನಿಕ್ಸ್ ಪ್ರಾಯೊಜಿಸಿದ ಮೈಕೋವೇವ್ ಒವನ್ ಗಳನ್ನು ಉದುಗೊರೆಯಾಗಿ ನೀಡಲಾಯಿತು.

ಪಾಕಿಸ್ತಾನದಲ್ಲಿ ವಾಸವಾಗಿದ್ದರೂ ಕನ್ನಡ ಭಾಷೆಯನ್ನು ಮತನ್ನಾಡುತ್ತಾ, ತಮ್ಮ ಮಗನಿಗೂ ಕನ್ನಡ ಕಲಿಸಿದ ಶ್ರೀಮತಿ ಮಸೂದ್ ಉನ್ನಿಸಾ ರವರನ್ನು ಗುರುತಿಸಿ, ವೇದಿಕೆಯಮೇಲೆ ಗೌರಿವಸಿಲಾಯಿತು.

kannada paata shaale dubai_Aprl 30-2016-DSC_7047

kannada paata shaale dubai_Aprl 30-2016-DSC_7052

kannada paata shaale dubai_Aprl 30-2016-DSC_7056

kannada paata shaale dubai_Aprl 30-2016-DSC_7060

kannada paata shaale dubai_Aprl 30-2016-DSC_7065

kannada paata shaale dubai_Aprl 30-2016-DSC_7072

kannada paata shaale dubai_Aprl 30-2016-DSC_7099

kannada paata shaale dubai_Aprl 30-2016-DSC_7147

kannada paata shaale dubai_Aprl 30-2016-DSC_7148

kannada paata shaale dubai_Aprl 30-2016-DSC_7161

kannada paata shaale dubai_Aprl 30-2016-DSC_7164

kannada paata shaale dubai_Aprl 30-2016-DSC_7176

ಕಾರ್ಯಕ್ರಮದಲ್ಲಿ ಕನ್ನಡ ಪಾಠ ಶಾಲೆಯ ಮಕ್ಕಳು ಪ್ರದರ್ಶಿಸಿದ ನೃತ್ಯ, ಹಾಡು, ಕಿರು ನಾಟಕ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು, ಶ್ರೀಮತಿ ಶ್ವೇತಾ ನಾಡಿಗ್ ಮತ್ತು ಶ್ರೀ ವೆಂಕಟ್ ರವರು ನಡೆಸಿದ ಮೂರು ತಂಡಗಳ ರಸಪ್ರಶ್ನೆ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.

ಹಡುಗಾರಿಕೆಗೆ ರುಚಿಕಾ ,ಪ್ರಣವ್,ಮನೀಶ್ ಮತ್ತು ಅಮೋಘವರ್ಷ ರವರ ಹಾಡುಗಾರಿಕೆ ಗಮನಸೆಳೆದರೆ , ಸಿಂಚನ ಮತ್ತು ಕಿಶನ್ ರ ಪ್ರರ್ಥನೆ ಸೊಗಸಾಗಿ ಮೂಡಿ ಬಂತು. ಶ್ರೀಮತಿ ಮಾಧವಿ ಪ್ರಸಾದ್ ರವರ ಶಸ್ತ್ರೀಯ ಸಂಗೀತ ಗಾಯನ ಸೊಗಸಾಗಿ ಮೂಡಿಬಂತು.

ಇದೇ ಸಂದರ್ಭದಲ್ಲಿ ಕನ್ನಡ ಪಾಠ ಶಾಲೆಯ ಪೋಷಕರಿಗಾಗಿ ಕರಕುಶಲ ವಸ್ಥು ತಯಾರಿಕೆ ಬಗ್ಗೆ ತರಬೇತಿ ನೀಡಿದ ಶ್ರೀಮತಿ ಮಮತಾ ಕೋಟಿಯನ್ ರವರು ತಮ್ಮ ತಂಡ ಮಾಡಿದ ಕರಕುಶಲ ವಸ್ಥು ಪ್ರದರ್ಶಿಸಿದರು , ಶ್ರೀಮತಿ ಸುರೆಖಾ ವೀರೆಂದ್ರಬಾಬು ರವರು ವಿಜೇತರ ಆಯ್ಕೆಮಾಡಿದರು , ಬಹುಮಾನವನ್ನು ಶ್ರೀ ವಿನೀತ್ ರವರಿಂದ ನೀಡಿ ಗೌರವಿಸಿದರು

ಕಾರ್ಯಕ್ರಮದ ವೇದಿಕೆ ಆಯೋಜನೆ ಹಾಗು ಸಹಾಯ ಕಾರ್ಯಗಳನ್ನು ಶ್ರೀ ಪುಟ್ಟರಾಜು ಗೌಡ, ಶ್ರೀ ಅರುಣ್ ಕುಮಾರ್, ಶ್ರೀಮತಿ ಕಾಂತ ಪಿ ಗೌಡ, ಶ್ರೀ ಯುವರಾಜ್, ಶ್ರೀ ಶಂತವೀರ್ ಗಣವರಿ, ಶ್ರೀ ಸುಧೀರ್ ಭಂಡಾರಿ, ಶ್ರೀರಾಮ್ ರವರು ಕ್ರಮವಕ್ಕಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗಾಗಿ ಅಂತ್ಯಗೊಂಡಿತು.

Write A Comment