ಕರ್ನಾಟಕ

ಸಿದ್ದರಾಮಯ್ಯಗೆ ಶನಿಕಾಟ, ಕುರ್ಚಿ ಅಲುಗಾಡುತ್ತಿದೆ: ಈಶ್ವರಪ್ಪ

Pinterest LinkedIn Tumblr

eajrrejbಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿಕಾಟ ಶುರುವಾಗಿದೆ. ಅವರು ಮತ್ತು ಅವರ ಮಗನ ಒಂದೊಂದೇ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುತ್ತಿವೆ. ಇದರಿಂದ ಸಿದ್ದರಾಮಯ್ಯ ಕುರ್ಚಿ ಅಲುಗಾಡತೊಡಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಟೀಕಿಸಿದರು.
ಸಿದ್ದರಾಮಯ್ಯ ಪಕ್ಷ ನಿಷ್ಠೆ ಇರುವ ರಾಜಕಾರಣಿ ಅಲ್ಲ. ಕುರ್ಚಿ ನಿಷ್ಠೆ ರಾಜಕಾರಣಿ. ಅಧಿಕಾರದಿಂದ ಅವರನ್ನು ಕೆಳಗಿಳಿಸಿದ ದಿನವೇ ಸರ್ಕಾರ ಉರುಳಲಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಈಶ್ವರಪ್ಪ ಅವರು ಭಾನುವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬರ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದುಬಾರಿ ಕಾರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ದುಬಾರಿ ಕಾರು ಹಿಂದಿರುಗಿಸಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕೋಟಿ ಮೊತ್ತದ ಕಾರಿನಲ್ಲಿ ಬರ ಅಧ್ಯಯನ ಸೂಕ್ತವಲ್ಲ. ಈ ಬಗ್ಗೆ ಸಕಾಲದಲ್ಲಿ ಮುಖಂಡರನ್ನು ಎಚ್ಚರಿಸಿದ ಮಾಧ್ಯಮಗಳಿಗೆ ಧನ್ಯವಾದ ಎಂದು ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದರು.

Write A Comment