ಕರ್ನಾಟಕ

ಕ್ಲಾಸ್ ಗೆ ಶಾರ್ಟ್ಸ್ ಧರಿಸಿ ಬಂದ ವಿದ್ಯಾರ್ಥಿನಿ; ಪ್ರೊಫೆಸರ್ ಆಕ್ಷೇಪ!

Pinterest LinkedIn Tumblr

Shortsಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಭಾರತೀಯ ಕಾನೂನು ವಿವಿಯಲ್ಲಿ ಪ್ರೊಫೆಸರ್ ಒಬ್ಬರು 3ನೇ ವರ್ಷದ ವಿದ್ಯಾರ್ಥಿನಿ ಶಾರ್ಟ್ಸ್ ( ಚಡ್ಡಿ) ಧರಿಸಿ ಬಂದಿದ್ದಕ್ಕೆ ಆಕ್ಷೇಪಿಸಿರುವುದು ಇದೀಗ ಭಾರೀ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಏಪ್ರಿಲ್ 4ರಂದು ಈ ಘಟನೆ ನಡೆದಿದೆ. ವಿದ್ಯಾರ್ಥಿನಿಗೆ ಬೆಂಬಲ ಸೂಚಿಸಿರುವ ವಿದ್ಯಾರ್ಥಿನಿಯರು ಪ್ರತಿಭಟನಾರ್ಥವಾಗಿ ಮರುದಿನ ಪ್ರೊಫೆಸರ್ ಅವರ ತರಗತಿಗೆ ಶಾರ್ಟ್ಸ್ ಧರಿಸಿ ಹಾಜರಾಗಿರುವುದಾಗಿ ವರದಿ ವಿವರಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ವಿದ್ಯಾರ್ಥಿನಿಯೊಬ್ಬಳು ತರಗತಿಗೆ ಆಗಮಿಸುವಾಗ ಧರಿಸಿದ ಉಡುಗೆಗಾಗಿ ಆಕೆಯನ್ನು ಪ್ರೊಫೆಸರ್ ಹೀನಾಯವಾಗಿ ಹೀಯಾಳಿಸಿದ್ದರು. ಅಲ್ಲದೇ ಆಕೆಯ ನಡತೆಯನ್ನೂ ಪ್ರಶ್ನಿಸಿದ್ದರು ಎಂದು ವರದಿ ತಿಳಿಸಿದೆ.

ಶಾರ್ಟ್ಸ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಗೆ ಪ್ರೊಫೆಸರ್ ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಬಗ್ಗೆ ವಿವಿಯ ಉಪ ಕುಲಪತಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೂ ಈ ಬಗ್ಗೆ ವಿಶೇಷ ಸಮಿತಿಯನ್ನು ರಚಿಸಿ ಪ್ರೊಫೆಸರ್ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿರುವುದಾಗಿ ವಿದ್ಯಾರ್ಥಿಯೊಬ್ಬ ತಿಳಿಸಿರುವುದಾಗಿ ವರದಿ ಹೇಳಿದೆ.
-ಉದಯವಾಣಿ

Write A Comment