ಕರ್ನಾಟಕ

ಪ್ರೀತಿಸಲು ಒಲ್ಲೆ ಎಂದ ಯುವತಿ : ಮನನೊಂದ ಯುವಕ ನೇಣಿಗೆ ಶರಣು

Pinterest LinkedIn Tumblr

nenuತಿ.ನರಸೀಪುರ,ಏ.3- ಪ್ರೀತಿಸಲು ಒಲ್ಲೆ ಎಂದಿದ್ದಕ್ಕೆ ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ವಿದ್ಯಾನಗರ ನಿವಾಸಿ ಸಂತೋಷ್(26) ನೇಣಿಗೆ ಶರಣಾದ ಯುವಕ. ಈತ ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ಯುವತಿಯೊಬ್ಬಳ್ಳನ್ನು ಪ್ರೀತಿಸುತ್ತಿದ ಎನ್ನಲಾಗಿದ್ದು, ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮನನೊಂದು ಕಳೆದ ರಾತ್ರಿ 10.30ರ ಸಮಯದಲ್ಲಿ ವಿದ್ಯಾನಗರ ಬಡಾವಣೆಯ ಹಿಂಭಾಗದ ಜಮೀನಿಗೆ ತೆರಳಿ ಕಂಠಪೂರ್ತಿ ಕುಡಿದು, ಪಕ್ಕದಲ್ಲಿದ್ದ ಗೊಬ್ಬಳಿ ಮರಕ್ಕೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ಮರದಲ್ಲಿ ನೇತಾಡುತ್ತಿದ್ದ ಶವವನ್ನು ನೋಡಿ ಪಟ್ಟಣದ ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ತಿ.ನರಸೀಪುರ ಪಟ್ಟಣ ಠಾಣೆಯ ಎಎಸ್‌ಐ ದೊಡ್ಡೇಗೌಡ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment