ಕರ್ನಾಟಕ

2016-17 ನೇ ಸಾಲಿನ ಬಿಬಿಎಂಪಿ ಬಜೆಟ್

Pinterest LinkedIn Tumblr

bbmpollಬೆಂಗಳೂರು: 2016-17 ನೇ ಸಾಲಿನ ಬಿಬಿಎಂಪಿಯ ಕೌನ್ಸಿಲ್ ಬಜೆಟ್ ಮಂಡನೆ ನಡೆಯುತ್ತಿದ್ದು, ಈ ಬಾರಿಯ ಬಜೆಟ್ ಗಾತ್ರ 8994.41 ಕೋಟಿ ರುಪಾಯಿಗಳಷ್ಟಾಗಿದೆ.

ಬಿಬಿಎಂಪಿ ಕಂದಾಯ ವಿಭಾಗದ ಪ್ರಮುಖ ಘೋಷಣೆಗಳು ಇಂತಿದೆ.

ವೇತನ, ಪಿಂಚಣಿ ವಿಭಾಗಕ್ಕೆ 661 ಕೋಟಿ ರು. ಅನುದಾನ

ಬಿಬಿಎಂಪಿ ಆಡಳಿತಾತ್ಮಕ ವೆಚ್ಚ 241 ಕೋಟಿ ರುಪಾಯಿ

ವಿವಿಧಡೆ ಸಾಲ, ಬಡ್ಡಿ, ಮರುಪಾವತಿಗೆ 360 ಕೋಟಿ ರು.

ಬೆಂಗಳೂರಿನ ಕಸ ವಿಲೇವಾರಿಗೆಂದು 636 ಕೋಟಿ ರು.

ಆರೋಗ್ಯ, ಶಿಕ್ಷಣ ವಲಯಕ್ಕೆ 59 ಕೋಟಿ ರುಪಾಯಿ

ಚಾಲ್ತಿ ಆಸ್ತಿ, ಹೊಣೆಗಾರಿಕೆಗೆ 446.77 ಕೋಟಿ ರುಪಾಯಿ

ಮೂಲ ಸೌಕರ್ಯ ಅಭಿವೃದ್ದಿಗೆ 1958 ಕೋಟಿ ರುಪಾಯಿ

ಸರಕಾರಿ ಅನುದಾನಿತ ಕಾಮಗಾರಿಗಳಿಗೆ 3773 ಕೋಟಿ

ತೋಟಗಾರಿಕೆ, ಅರಣ್ಯೀಕರಣಕ್ಕೆ 153 ಕೋಟಿ ಅನುದಾನ

ಪ್ರಸುತ್ತ ಸಾಲಿನಲ್ಲಿ 2445 ಕೋಟಿ ರು. ಅದಾಯದ ಗುರಿ

ಸರಕಾರದಿಂದ 4235 ಕೋಟಿ ರು. ಅನುದಾನ ನಿರೀಕ್ಷೆ

ಮಂಗಳಮುಖಿಯರಿಗೆ ಅರ್ಥಿಕ ಸಹಾಯಕ್ಕೆ 2ಕೋಟಿ ರು

ನಾಡ ಪ್ರಭು ಕೆಂಪೇಗೌಡ ಸಮಾಧಿ ಅಭಿವೃದ್ಧಿಗೆ 2 ಕೋಟಿ ರು

ನೇಕಾರರು, ಕುಬಾರರು, ಮೇಧಾರರು, ಮಡಿವಾಳ ಇತರೆ ಕುಶಲ ಕರ್ಮಿಗಳ ಸಮುದಾಯಕ್ಕೆ 5ಕೋಟಿ ರು

ಸಂಧ್ಯಾ ಕುಟೀರ ಯೋಜನೆಯಡಿ ಬಿಬಿಎಂಪಿ ವೃದ್ಧಾಶ್ರಮ ಆರಂಭಕ್ಕೆ 3 ಕೋಟಿ ರು.

ಘನತ್ಯಾಜ್ಯ ನಿರ್ವಹಣೆಗೆ ಒಟ್ಟು 300 ಕೋಟಿ ರು ಮೀಸಲು

ಪೌರ ಕಾರ್ಮಿಕರಿಗೆ ಬಿಸಿಯೂಟ,189 ಒಣ ತ್ಯಾಜ್ಯ ಸಂಗ್ರಹಣಾ ಘಟಕ

ತ್ಯಾಜ್ಯ ನಿರ್ವಹಣೆಗೆ 440 ಕೋಟಿ, 4000 ಪೌರ ಕಾರ್ಮಿಕರ ನೇಮಕ

ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸೋ ಮಕ್ಕಳಿಗೆ 5000 ರು. ಬಾಂಡ್

200 ನಾಲ್ಕು ಚಕ್ರದ ಆಟೋ, 100 ಕಾಂಪ್ಯಾಕ್ಟರ್, 16 ಕಸ ಗುಡಿಸುವ ಯಂತ್ರಗಳು

ವಾಣಿಜ್ಯ ಮಳಿಗೆಗಳು, ಬಸ್ ನಿಲ್ದಾಣಗಳಲ್ಲಿ ವೈ- ಫೈ

250 ಶೌಚಾಲಯಗಳು, 80 ಇ- ಶೌಚಾಲಯಗಳು

ಮರಗಳನ್ನು ಕಡಿಯುವುದರ ವಿರುದ್ದ ಆಕ್ಷೇಪಣೆ ಸಲ್ಲಿಸಲು ಆನ್ ಲೈನ್ ವ್ಯವಸ್ಥೆ

198 ವಾರ್ಡ್ ಗಳಲ್ಲಿ ಶುದ್ದ ಕುಡಿಯುವ ನೀರು ಘಟಕಕ್ಕೆ 26 ಕೋಟಿ

ಕೆ.ಆರ್ ಮಾರ್ಕೆಟ್, ಜಾನ್ಸನ್ ಮಾರ್ಕೆಟ್ ಅಭಿವೃದ್ದಿಗೆ 10ಕೋಟಿ

ರಾಜಕಾಲುವೆ ನಿರ್ವಹಣೆಗೆ ಒಟ್ಟು 300 ಕೋಟಿ ನಿಗದಿ

3 ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದ ಅಧಿಕಾರಿಗಳ ವರ್ಗಾವಣೆ

ಅಂಬೇಡ್ಕರ್ ಜನ್ಮ ದಿನೋತ್ಸವ ಆಚರಣೆಗೆ 1ಕೋಟಿ ರು

ನಾಗರಿಕರು ಕುಂದು ಕೊರತೆಗಳನ್ನು ಸಲ್ಲಿಸಲು ಸಹಾಯ ಮೊಬೈಲ್ ಆಪ್ ಜಾರಿ

ಸಾರ್ವಜನಿಕರಿಗೆ ಪ್ರತಿ ಬುಧವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ

ಅನಧಿಕೃತ ಜಾಹೀರಾತು ಫಲಕಗಳ ತೆರವುಗೊಳಿಸಲು ಆನ್ ಲಯಲ್ ಜಾಹೀರಾತು ಆ್ಯಪ್ ಬಳಕೆ

ಅಧಿಕೃತ ಜಾಹೀರಾತು ಫಲಕಗಳಿಗೂ Hoarding Identification Number

ಜನನ ಮತ್ತು ಮರಣ ಪತ್ರಗಳನ್ನು ಪಡೆಯಲು ಆನ್ ಪಯನ್ ಮೂಲಕ ಅರ್ಜಿ ಸಲ್ಲಿಸುವ ತಂತ್ರಾಂಶ

ತೆರಿಗೆ ಮತ್ತು ತೆರಿಗೆಯೇತರ ವರಮಾನಗಳು

ಆಸ್ತಿ ತೆರಿಗೆ ಸಂಗ್ರಹದ ಗುರಿ ರು.3100 ಕೋಟಿ

ಅಂಗಡಿ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ ಸಂಗ್ರಹಣೆ ರು.50 ಕೋಟಿ

ಜಾಹೀರಾತು ತೆರಿಗೆಯಿಂದ ರು.145 ಕೋಟಿ

ಆಪ್ಟಿಕಲ್ ಫೈಬರ್ ಕೇಬಲ್ ಶುಲ್ಕ ರು.350 ಕೋಟಿ

ಘನತ್ಯಾಜ್ಯ ನಿರ್ವಹಣೆ ಕರ ರು. 80 ಕೋಟಿ

ಶುಲ್ಕ ಮತ್ತು ದಂಡ ರು.372 ಕೋಟಿ

ರಾಜ್ಯ ಸರಕಾರದ ಅನುದಾನ ರು.4222.73 ಕೋಟಿ

ಕೇಂದ್ರ ಸರಕಾರದ ಅನುದಾನ ರು.13 ಕೋಟಿ

Write A Comment