ಕರ್ನಾಟಕ

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮುಂದೆ ಹಸ್ತಮೈಥುನ ಮಾಡಿದ ಚಾಲಕ !

Pinterest LinkedIn Tumblr

taxi

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮಹಿಳಾ ಪ್ರಯಾಣಿಕರ ಎದುರೇ ಹಸ್ತಮೈಥುನ ಮಾಡಿಕೊಂಡು ಅಸಭ್ಯವರ್ತನೆ ತೋರಿದ ಉಬರ್ ಕಂಪನಿ ಕಾರು ಚಾಲಕ ಸುರೇಶ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ರಾತ್ರಿ ಎಚ್ಎಸ್ಆರ್ ಲೇಔಟ್ ನ 7ನೇ ಹಂತದಿಂದ ಎಸ್ ಜಿ ಪಾಳ್ಯಕ್ಕೆ ಉಬರ್ ಕಾರಿನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದಾಗ ಚಾಲಕ ಸುರೇಶ್ ಹಸ್ತಮೈಥುನ ಮಾಡಿಕೊಂಡಿರುವುದಾಗಿ ಮಹಿಳೆ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಚಾಲಕ ಸುರೇಶ್ ನನ್ನು ಬಂಧಿಸಿದ್ದಾರೆ. ಸುರೇಶ್ ಮೂಲತಃ ಚಿಕ್ಕಬಳ್ಳಾಪುರದವನು ಎಂದು ತಿಳಿದುಬಂದಿದೆ.

ಸುರೇಶ್ ಎಸ್ಆರ್ಎಸ್ ಟ್ರಾವೆಲ್ಸ್ ನಲ್ಲಿ ಬಸ್ ಚಾಲಕನಾಗಿದ್ದ. ಕಳೆದ ಎರಡು ತಿಂಗಳದಿಂದಷ್ಟೇ ಆತ ಉಬರ್ ಕಾರು ಹೊಡಿಸುತ್ತಿದ್ದು, ಇದೀಗ ಸೆಕ್ಷನ್ 509ರ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Write A Comment