ಕರ್ನಾಟಕ

ಐಪಿಎಲ್ ಜೊತೆ ಜಟಾಪಟಿಗೆ ಜನಪ್ರಿಯ ಸಿನೆ ತಾರೆಯರ ಬಿಗ್ ಬಜೆಟ್ ಸಿನೆಮಾಗಳು ಸಜ್ಜು !

Pinterest LinkedIn Tumblr

sudeep

ಬೆಂಗಳೂರು: ಸಾಮಾನ್ಯವಾಗಿ ಕ್ರಿಕೆಟ್ ಸರಣಿಗಳು ನಡೆಯುವಾಗ ಬಹು ನಿರೀಕ್ಷಿತ ದೊಡ್ಡ ಬಜೆಟ್ ಸಿನೆಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡುವುದು ವಾಡಿಕೆ. ಆದರೆ ಬರಲಿರುವ ಐ ಪಿ ಎಲ್ ಸಮಯದಲ್ಲೇ ಹಲವಾರು ಜನಪ್ರಿಯ ಸಿನೆ ತಾರೆಯರ ಸಿನೆಮಾಗಳು ಬಿಡುಗಡೆಗೆ ಸಜ್ಜಾಗುತ್ತಿರುವುದು ವಿಶೇಷ.

ಪುನೀತ್ ರಾಜಕುಮಾರ್ ನಟಿಸಿರುವ ‘ಚಕ್ರವ್ಯೂಹ’ ಏಪ್ರಿಲ್ 8ಕ್ಕೆ ಬಿಡುಗಡೆಯಾಗಲಿದೆ ಎಂದಿದ್ದಾರೆ ನಿರ್ಮಾಪಕರು. ಅಂದೇ ಐಪಿಲ್ 9 ನೆ ಆವೃತ್ತಿಯ ಉದ್ಘಾಟನಾ ಸಮಾರಂಭವಿದೆ. ಏಪ್ರಿಲ್ ಕೊನೆಯ ಭಾಗಕ್ಕೆ ಸುದೀಪ್ ನಟನೆಯ ‘ಕೋಟಿಗೊಬ್ಬ-2’ ಕೂಡ ಬಿಡುಗಡೆಯಾಗಲಿದೆ. ಕೆ ಎಸ್ ರವಿಕುಮಾರ್ ನಿರ್ದೇಶನದ ಈ ಸಿನೆಮಾ ದ್ವಿಭಾಷಾ ಚಲನಚಿತ್ರವಾಗಿದ್ದು, ತಮಿಳಿನಲ್ಲಿ ‘ಮುದಿಂಜ ಇವನೈ ಪುಡಿ’ ಎಂದು ಬಿಡುಗಡೆಯಾಗಲಿದೆ. ದರ್ಶನ್ ನಟಿಸಿರುವ ‘ಜಗ್ಗು ದಾದ’ ಮಾತ್ರ ಐಪಿಲ್ ಮುಗಿದು ಮೇ ನಲ್ಲಿ ಬಿಡುಗಡೆಯಾಗಲಿದೆ. ಕ್ರಿಕೆಟ್ ಸರಣಿ ಇದ್ದರೂ, ಬೇಸಿಗೆ ರಜವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಮಾಪಕರು ಕ್ರಿಕೆಟ್ ಗೆ ಅಂಜದೆ ಸಿನೆಮಾಗಳ ಬಿಡುಗಡೆಗೆ ಮುಂದಾಗಿದ್ದಾರೆ.

‘ಚಕ್ರುವ್ಯೂಹ’ವನ್ನು ಬಿಡುಗಡೆ ಮಾಡಲಿರುವ ನಿರ್ಮಾಪಕ ಎನ್ ಕೆ ಲೋಹಿತ್ ಹೇಳುವಂತೆ “ಏಪ್ರಿಲ್ ನಲ್ಲಿ ಬೇಸಿಗೆ ರಜಗಳು ಪ್ರಾರಂಭವಾಗಲಿವೆ. ಕ್ರಿಕೆಟ್ ಹುಚ್ಚರಂತೆ ಪುನೀತ್ ರಾಜಕುಮಾರ್ ಅವರನ್ನು ನೋಡಲು ಸಿನೆಮಾ ಅಭಿಮಾನಿಗಳು ಸಮಯ ಮಾಡಿಕೊಳ್ಳಲಿದ್ದಾರೆ. ಇದು ಅವರ ವೃತ್ತಿಜೀವನದ ಮಹತ್ವದ ಸಿನೆಮಾಗಳಲ್ಲೊಂದು” ಎನ್ನುತ್ತಾರೆ.

‘ಕೋಟಿಗೊಬ್ಬ ೨’ ಸಿನೆಮಾದ ನಿರ್ಮಾಪಕ ಸೂರಪ್ಪ ಬಾಬು ಪ್ರಕಾರ “ಇಂದು ಜನ ಐಪಿಎಲ್ ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಈಗ ಅದು ಆಟವಾಗಿಲ್ಲ ಬದಲಾಗಿ ಜನ ಅದನ್ನು ಜೂಜು ಎಂದೇ ನಂಬಿದ್ದಾರೆ. ಕ್ವಾರ್ಟರ್ ಫೈನಲ್ಸ್ ನಂತರ ಐಪಿಎಲ್ ಹುಚ್ಚು ತುಸು ಗರಿಗೆದರಬಹುದು” ಎನ್ನುತ್ತಾರೆ.

ಈ ಮಧ್ಯೆ ಶರಣ್ ನಟಿಸಿರುವ ‘ಜೈ ಮಾರುತಿ ೮೦೦’, ಗಣೇಶ್ ನಟನೆಯ ‘ಸ್ಟೈಲ್ ಕಿಂಗ್’ ಮತ್ತು ರಕ್ಷಿತ್ ಶೆಟ್ಟಿ ನಟನೆಯ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಕೂಡ ಬಿಡುಗಡೆಗೆ ಸಿದ್ಧವಾಗಿವೆ ಆದರೆ ಬಿಡುಗಡೆ ದಿನಾಂಕ ಅಂತಿಮವಾಗಬೇಕಿದೆ.

Write A Comment