ಕರ್ನಾಟಕ

ಕನ್ನಡಿಗರ ಆಸ್ಮಿತೆ ರೂವಾರಿ ಮಯೂರ ಬ್ರಾಹ್ಮಣ ಸಂಶೋಧಕರ ಘೋಷಣೆ

Pinterest LinkedIn Tumblr

chimu

ಬೆಂಗಳೂರು: : ಕನ್ನಡ ಭಾಷೆಗೆ ೨೦೦೦ ವರ್ಷಗಳ ಇತಿಹಾಸ ಇದ್ದರೂ ಕನ್ನಡಿಗರಿಗೆ ಅಸ್ಮಿತೆಯ ಭಾವನೆ ಬಂದಿದ್ದು ಚಂದ್ರವಳ್ಳಿ ಕಣಿವೆಯ ಮಯೂರ ವರ್ಮ ಎಂಬ ಬ್ರಾಹ್ಮಣನಿಂದ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಹೇಳಿದ್ದಾರೆ.

ಕ್ರಿ.ಶ.ಮೂರನೇ ಶತಮಾನದವರೆಗೆ ಕನ್ನಡಿಗರು ಮೌರ್‍ಯ, ಶಾತವಾಹನ, ಪಲ್ಲವ ಮುಂತಾದ ಹೊರಗಿನ ದೊರೆಗಳಿಂದ ಆಳಿಸಿಕೊಂಡರು.

ಆಡುಮಾತಾಗಿದ್ದರೂ ಕನ್ನಡವು ಗೌರವಯುತ ಭಾಷೆ ಆಗಿರಲಿಲ್ಲ. ಬರಹದ ಭಾಷೆಯೂ ಆಗಿರಲಿಲ್ಲ. ಕನ್ನಡಿಗರಿಗೆ ತಮ್ಮತನದ “ಅಸ್ಮಿತೆ”ಯ ಅರಿವಿರಲಿಲ್ಲ. ಅಂತಹ ಕನ್ನಡಿಗರಿಗೆ ಅಸ್ಮಿತೆಯ ಅರಿವು ಮೊದಲು ಮೂಡಿಸಿದ್ದು ಕದಂಬ ವಂಶದ ಮಯೂರಶರ್ಮ ಎಂಬ ಬ್ರಾಹ್ಮಣ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ಪ್ರತಿಪಾದಿಸಿದರು.

ಚಂದ್ರವಳ್ಳಿಯ ಕಣಿವೆ ಕನ್ನಡಿಗರ ಸ್ಫೂರ್ತಿಯ ಕೇಂದ್ರ. ಅದನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು. ಕನ್ನಡಿಗರು ಚಂದ್ರವಳ್ಳಿಯ ಕಣಿವೆಯ ಬಗ್ಗೆ ಹೆಚ್ಚಿನ ಅಭಿಮಾನ ತಾಳಬೇಕು. ಚಂದ್ರವಳ್ಳಿ ಕನ್ನಡಿಗರ ಅಸ್ಮಿತೆಯ, ಸ್ವತಂತ್ರ ವ್ಯಕ್ತಿತ್ವದ, ಸ್ವಾಭಿಮಾನದ ತಲಕಾವೇರಿ, ಉಗಮಸ್ಥಾನ, ತೀರ್ಥೋದ್ಭವದ ಗಂಗೋತ್ರಿಯಾಗಬೇಕು ಎಂದು ಆಶಿಸಿದರು.

ಮಯೂರವರ್ಮ ಎಂಬ ಬ್ರಾಹ್ಮಣನ ಮನೆಯ ಪಕ್ಕ ಕದಂಬ ವೃಕ್ಷವಿದ್ದುದರಿಂದ ಅವರ ವಂಶವು ಕದಂಬ ಎಂದೇ ಹೆಸರಾಯಿತು. ಅವರು ಯುವಕನಾಗಿದ್ದಾಗ ತನ್ನ ಗುರು ವೀರಸೇನನ ಜತೆ ತನ್ನ ಹುಟ್ಟೂರು ತಾಳಗುಂದದಿಂದ ತಮಿಳುನಾಡಿನ ಪಲ್ಲವರ ರಾಜಧಾನಿ ಕಂಚಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೋಗಿ, ಅಲ್ಲಿ ಘಟಿಕಾ ಸ್ನಾನಕ್ಕೆ ಸೇರಿಕೊಂಡ ಎಂದು ವಿವರಿಸಿದ ಚಿದಾನಂದ ಮೂರ್ತಿ, ಚಿತ್ರದುರ್ಗ ಪಕ್ಕದಲ್ಲಿ ಭಾರಿ ಬಂಡಗಳಿಂದ ತುಂಬಿರುವ ಬೆಟ್ಟದ ಚಂದ್ರವಳ್ಳಿ ಕಣಿವೆಯ ಸಿದ್ದೇಶ್ವರ ಗುಹೆಯ ಪಕ್ಕದ ಬಂಡೆ ಮೇಲೆ ಸುಮಾರು ಕ್ರಿ.ಶ. ೩೫೦ರ ಮಯೂರವರ್ಮನ ಶಾಸನವಿದೆ.

ಅಲ್ಲಿ ಒಂದು ಕೆರೆಯೂ ಇದೆ. ರಾಜ್ಯ ಸರ್ಕಾರ ಅಲ್ಲಿರುವ ಕಣಿವೆಯನ್ನು ಸಂರಕ್ಷಿಸಿ, ಅದನ್ನು ಐತಿಹಾಸಿಕ ಪರಂಪರೆ ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

Write A Comment