ಕರ್ನಾಟಕ

ಹೀಗೂ ಇರ್ತಾರೆ..! : ಸೋತ ಅಭ್ಯರ್ಥಿಗಳಿಂದ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮ

Pinterest LinkedIn Tumblr

candiಮಂಡ್ಯ, ಮಾ.7- ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳು ಭ್ರಮನಿರಸನವಾಗಿ ಕಾಲ ಕಳೆಯುವವರೇ ಹೆಚ್ಚು. ಆದರೆ ಎರಡು ಜಿಲ್ಲಾ ಪಂಚಾಯಿತಿಗಳ ಅಭ್ಯರ್ಥಿಗಳು ಮತದಾರರು, ಕಾರ್ಯಳಕರ್ತರಿಗೆ ಕೃತಜ್ಞತೆ ಅರ್ಪಿಸುವ ಕಾರ್ಯುಕ್ರಮ ನಡೆಸುತ್ತಿರುವ ಶ್ಲಾಘನೀಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಕೆ. ನಾಗರಾಜು ತಿಳಿಸಿದರು.

ಮಲ್ಲನಾಯಕನಕಟ್ಟೆ ಗ್ರಾಮದ ದೊಡ್ಡಮ್ಮ ದೇವಸ್ಥಾನದ ಆವರಣದಲ್ಲಿ ದುದ್ದ ಹಾಗೂ ಹೊಳಲು ಕ್ಷೇತ್ರದ ಪರಾಜಿತ ಅಭ್ಯರ್ಥಿಗಳಾದ  ಲಲಿತಾ, ಜಿ.ಕೆ. ರಾಣಿ ಅವರು ಕ್ಷೇತ್ರದ ಮತದಾರರಿಗೆ ಏರ್ಪಡಿಸಿದ್ದ  ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೆರಗೋಡು ಕ್ಷೇತ್ರವಿದ್ದಾಗ ದುದ್ದ ಹೋಬಳಿಗೆ ರಾಜಕೀಯವಾಗಿ ಒಂದು ವಿಶೇಷ ಪ್ರಬುದ್ಧತೆ ಇತ್ತು. ಇಂದು ಇಲ್ಲಿ ಮೇಲುಕೋಟೆ ಕ್ಷೇತ್ರಕ್ಕೆ ಸೇರಿದ ಬಳಿಕ ಈ ಕ್ಷೇತ್ರದ ಕಾಂಗ್ರೆಸ್ ಕಾರ್ಯಂಕರ್ತರನ್ನು ಯಾರೂ ಗಮನಿಸುವುದಿಲ್ಲ. ಆದರೂ ಕಾರ್ಯಭಕರ್ತರು ಕಾಂಗ್ರೆಸ್ ತೊರೆದು ಹೋಗಿಲ್ಲ. ಸಂಘಟನೆ ಮತ್ತು ಸಾಮರ್ಥ್ಯದ ಕೊರತೆ ಈ ಕ್ಷೇತ್ರದಲ್ಲಿ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ನಾಯಕರ ನಡುವಳಿಕೆಗಳು ಅಪ್ರಬುದ್ಧತೆ, ತಪ್ಪುನಿರ್ಧಾರ ಏನೇ ಆದರೂ ಗ್ರಾಮೀಣ ಮಟ್ಟದಲ್ಲಿ ಕಾರ್ಯಂಕರ್ತರು ಪಕ್ಷ ಬಿಟ್ಟಿಲ್ಲ. ಜಾ.ದಳಕ್ಕೆ ಪೈಪೋಟಿ ನೀಡುತ್ತಿದ್ದಾರೆ. ಕಾರ್ಯನಕರ್ತರಿಗೆ ರಾಜಕೀಯವಾಗಿ ಆತ್ಮವಿಶ್ವಾಸ ತುಂಬಲು ಇಂತಹ ಕಾರ್ಯಿಕ್ರಮಗಳು ಆಗಾಗ್ಗೆ ನಡೆಯಬೇಕು ಎಂದರು.

ಕಾಂಗ್ರೆಸ್ ಯಾರಪ್ಪನ ಆಸ್ತಿಯಲ್ಲ, ನೂರಾರು ವರ್ಷ ಇತಿಹಾಸವಿದೆ. ಯುವಕರು ಸಂಘಟಿತರಾಗಿ ಸ್ವಸಾಮರ್ಥ್ಯವಿದ್ದರೆ, ಶಕ್ತಿ ಇದ್ದರೆ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಯುವಕರು ಸ್ವಸಾಮರ್ಥ್ಯವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು. ಮುಖಂಡ ಕೆಬ್ಬಳ್ಳಿ ಆನಂದ್ ಮಾತನಾಡಿ, ಅಭಿಮಾನಿಗಳು ಈ ಭಾಗದಲ್ಲಿ ಅಭ್ಯರ್ಥಿಯಾಗುವಂತೆ ಒತ್ತಾಯಿಸಿದಾಗ ನನ್ನ ಪತ್ನಿ ರಾಣಿಯವರನ್ನು ಕಣಕ್ಕಿಳಿಸಿದ್ದೆ. ಆದರೂ ಕಳೆದ ಬಾರಿಯಂತೆ ಗೊಂದಲ ಬೇಡ, ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಸೂಕ್ತ ಎಂದು ವರಿಷ್ಠರಿಗೆ ತಿಳಿಸಿದ್ದೆವು. ಆದರೆ ಅವರು ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ವಿಲರಾಗಿದ್ದಾರೆ ಎಂದರು.

ನಾನು ನಿಮ್ಮೊಡನೆ ಕಾಂಗ್ರೆಸ್ ಕಾರ್ಯಿಕರ್ತನಾಗಿರುತ್ತೇನೆ. ಒಗ್ಗಟ್ಟಿನಿಂದ ದುಡಿದು ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರೋಣ, ಇನ್ನು ಮುಂದೆ ಬರುವಂತಹ ಚುನಾವಣೆಯಲ್ಲಿ ಒಬ್ಬೊಬ್ಬ ನಾಯಕರನ್ನು ಹುಟ್ಟುಹಾಕಿ ಸ್ಥಳೀಯ ನಾಯಕರನ್ನು ಬೆಳೆಸೋಣ ಎಂದು ಕರೆ ನೀಡಿದರು. ಎಂ.ಎನ್. ಕಟ್ಟೆ ಸಿದ್ದೇಗೌಡ, ಶ್ಯಾಮ್‌ಸುಂದರ್, ಎ.ಪಿ.ಎಂ.ಸಿ. ಸದಸ್ಯ ರಾಮಚಂದ್ರು, ಸಿದ್ದರಾಮು, ರಾಜೇಶ್, ಕೃಷ್ಣೇಗೌಡ, ವಿಜಯಕುಮಾರ್ ಇತರರಿದ್ದರು.

Write A Comment