ಕರ್ನಾಟಕ

ಹೊಲಕ್ಕೆ ತೆರಳುವಾಗ ಕರಡಿ ದಾಳಿ, ಮಹಿಳೆಗೆ ಗಾಯ

Pinterest LinkedIn Tumblr

karadiಚಿತ್ರದುರ್ಗ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತಿಗೆ ಬುತ್ತಿ ಕೊಡಲಿಕ್ಕೆಂದು ಹೋದ ಸಂದರ್ಭದಲ್ಲಿ ಮಹಿಳೆ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಇಲ್ಲಿನ ಮೊಳಕಾಲ್ಮುರು ತಾಲೂಕಿನ ಬಿ.ಹನುಮಾಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಅಂಜಿನಮ್ಮ (30) ಎಂಬಾಕೆ ಕರಡಿ ದಾಳಿಗೊಳಗಾದ ಮಹಿಳೆ. ನಿನ್ನೆ ರಾತ್ರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿಗೆ ಬುತ್ತಿ ಕೊಡಲು ಹೋದಾಗ ಈ ಘಟನೆ ಸಂಭವಿಸಿದ್ದು, ಅಚ್ಚರಿ ಎನ್ನುವಂತೆ ನಾಲ್ಕು ನಾಯಿಗಳು ಕರಡಿ ಮೇಲೆ ಪ್ರತಿ ದಾಳಿ ನಡೆಸಿದ್ದರಿಂದ ಮಹಿಳೆ ಜೀವ ಉಳಿದುಕೊಂಡಿದೆ. ತೀವ್ರ ಗಾಯಗೊಂಡಿರುವ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Write A Comment