ಕರ್ನಾಟಕ

ಆಡಳಿತಾತ್ಮಕ ವರದಿ ಮಂಡಿಸಿ ಇತಿಹಾಸ ಸೃಷ್ಟಿಸಿದ ಬಿಬಿಎಂಪಿ ಉಪ ಮೇಯರ್

Pinterest LinkedIn Tumblr

eeeಬೆಂಗಳೂರು, ಫೆ.29-ಕಳೆದ ಏಳು ವರ್ಷಗಳಿಂದ ಪಾಲಿಕೆಯಲ್ಲಿ ಮಂಡನೆಯಾಗದ ಆಡಳಿತಾತ್ಮಕ ವರದಿಯನ್ನು ಉಪ ಮೇಯರ್ ಹೇಮಲತಾ ಗೋಪಾಲಯ್ಯ ಪಾಲಿಕೆ ಸಭೆಯಲ್ಲಿಂದು ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಪಾಲಿಕೆ ಸಭೆಯಲ್ಲಿ ಆಡಳಿತಾತ್ಮಕ ವರದಿಯನ್ನು ಮಂಡಿಸಿದ ನಂತರ ಮಾತನಾಡಿದ ಉಪಮೇಐರ್ ಕಾಲಕಾಲಕ್ಕೆ ಆಡಳಿತಾತ್ಮಕ ವರದಿಯನ್ನು ಮಂಡಿಸಿದ್ದರೆ, ಆಡಳಿತದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಾಧ್ಯವಿತ್ತು. ಕಳೆದ 2006ನೆ ಸಾಲಿನಿಂದ ಇದುವರೆಗೆ ಆಡಳಿತ ನಡೆಸಿದ ಯಾರೊಬ್ಬರೂ ವರದಿ ಮಂಡಿಸುವ ಗೋಜಿಗೂ ಹೋಗಿರಲಿಲ್ಲ.

ಆದರೆ ನಾನು ಉಪ ಮೇಯರ್ ಆದ ನಂತರ ಆಡಳಿತಾತ್ಮಕ ವರದಿ ಮಂಡಿಸಲು ತೀರ್ಮಾನಿಸಿ 2006ರಿಂದ ಇಲ್ಲಿಯವರೆಗಿನ ಆಡಳಿತಾತ್ಮಕ ವರದಿಗಳನ್ನು ಮಂಡಿಸಿದ್ದೇನೆ ಎಂದರು.

ಇನ್ನು ಮುಂದೆ ಕಾಲ ಕಾಲಕ್ಕೆ ಆಡಳಿತಾತ್ಮಕ ವರದಿ ಮಂಡಿಸುವ ಮೂಲಕ ಪಾಲಿಕೆ ಆಡಳಿತ ಸುಗಮವಾಗಿ ನಡೆದುಕೊಂಡು ಹೋಗಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಮೇಯರ್ ಮಂಜುನಾಥರೆಡ್ಡಿ ಮಾತನಾಡಿ, ಕಳೆದ 7 ವರ್ಷಗಳಿಂದ ಆಡಳಿತಾತ್ಮಕ ವರದಿ ಮಂಡಿಸದಿರುವುದು ಪಾಲಿಕೆ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. ಇಂದು ನಾವು ಆಡಳಿತಾತ್ಮಕ ವರದಿ ಮಂಡನೆ ಮಾಡಿ ಇತಿಹಾಸ ಸೃಷ್ಟಿಸಿದ್ದೇವೆ. ವರದಿ ಕುರಿತಂತೆ ಚರ್ಚಿಸಲು ಮಾ.9 ರಂದು ವಿಶೇಷ ಸಭೆ ಕರೆಯಲಾಗಿದೆ ಎಂದು ಹೇಳಿದರು.

Write A Comment