ಕರ್ನಾಟಕ

ಪಂ. ಚುನಾವಣೆ, ಕಲಬುರಗಿಯಲ್ಲಿ ಮತದಾನ ಬಹಿಷ್ಕಾರ

Pinterest LinkedIn Tumblr

Kalaburagiಕಲಬುರಗಿ: ಜೇವರ್ಗಿ ತಾಲೂಕಿನ ವರವಿ ಗ್ರಾಮಸ್ಥರು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮತದಾನವನ್ನು ಬಹಿಷ್ಕರಿಸಿದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರವನ್ನು ಬೇರೆ ಗ್ರಾಮಕ್ಕೆ ಸ್ಥಳಾಂತರಿಸಿದ್ದನ್ನು ಖಂಡಿಸಿ ಶನಿವಾರ ಎಲ್ಲಾ ಮತದಾರರು ಹಕ್ಕು ಚಲಾಯಿಸದೇ ಇರಲು ನಿರ್ಧರಿಸಿದ್ದಾರೆ. ಮತದಾನಕ್ಕೆ ಮನವೊಲಿಸಲು ಮನವಿ ಮಾಡಿರುವ ಚುನಾವಣಾಧಿಕಾರಿಗಳಿಗೆ ಮತದಾನ ಬಹಿಷ್ಕರಿಸುತ್ತಿರುವ ಬಗ್ಗೆ ಹಾಗೂ ಅದಕ್ಕೇನು ಕಾರಣ ಎನ್ನುವುದನ್ನು ಮನದಟ್ಟು ಮಾಡಿದ್ದಾರೆ.

ತಾಂಡಾದಲ್ಲೂ ಬಹಿಷ್ಕಾರ

ಜಿಲ್ಲೆಯ ಅಂಬಲಗಾ ತಾಂಡಾ ಜನತೆಯೂ ಮತದಾನ ಬಹಿಷ್ಕರಿಸಿದೆ. ತಾಂಡಾಕ್ಕೆ ರಸ್ತೆ ಕಾಮಗಾರಿ ಕೈಗೊಳ್ಳದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸುತ್ತಿರುವುದಾಗಿ ಅಲ್ಲಿಯ ಮತದಾರರು ತಿಳಿಸಿದ್ದಾರೆ. ಇದರಿಂದಾಗಿ ಬೂತ್ ನಂಬರ್ 191ರಲ್ಲಿ ಮತದಾನ ಸ್ಥಗಿತಗೊಂಡಿದೆ.

ಮತದಾನ ಸ್ಥಗಿತ: ಆಳಂದ ತಾಲೂಕಿನ ಮಟಕಿ, ಶ್ರೀಚಂದ್ ನಲ್ಲಿ ಮತಯಂತ್ರ ಕೆಟ್ಟುನಿಂತ ಹಿನ್ನೆಲೆಯಲ್ಲಿ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು.

ಮತದಾನ ಬಹಿಷ್ಕಾರ: ಬಸವಕಲ್ಯಾಣ ತಾಲೂಕಿನ ಗದಲೇಗಾಂವ್, ಸಿರಗಾಪುರ, ಖೇರ್ಡಾ(ಕೆ) 4 ಬೂತುಗಳಲ್ಲಿ ಮತದಾನ ಬಹಿಷ್ಕಾರ. ಹಾರಕೂಡ ಬದಲಾಗಿ ಗದಲೇಗಾಂವ್​ನಲ್ಲಿ ಗ್ರಾಪಂ ಕೇಂದ್ರ ಮಾಡುವಂತೆ ಆಗ್ರಹಿಸಿ ಬಹಿಷ್ಕರಿಸಲಾಗಿದೆ.

Write A Comment