ಕರ್ನಾಟಕ

ಸಿಸಿಎಲ್‌: ಬುಲ್ಡೋಜರ್ಸ್‌ ರನ್ನರ್ಸ್‌ ಅಪ್‌

Pinterest LinkedIn Tumblr

kic

ಬೆಂಗಳೂರು: ಸವಾಲಿನ ಮೊತ್ತ ಗಳಿಸಿಯೂ ಚುರುಕಿನ ಬೌಲಿಂಗ್ ಮಾಡುವಲ್ಲಿ ವಿಫಲವಾದ ಕರ್ನಾಟಕ ಬುಲ್ಡೋಜರ್ಸ್‌ ತಂಡ ಸ್ಯಾನ್‌ ಸಿಟಿ ಸೆಲಬ್ರೆಟಿ ಕ್ರಿಕೆಟ್‌ ಲೀಗ್‌ (ಸಿಸಿಎಲ್‌) ಆರನೇ ಆವೃತ್ತಿಯ ಫೈನಲ್‌ನಲ್ಲಿ ಮುಗ್ಗರಿಸಿತು.

ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಬುಲ್ಡೋಜರ್ಸ್ ತಂಡ ತೆಲುಗು ವಾರಿಯರ್ಸ್‌ ಎದುರು ಸೋಲು ಕಂಡಿತು. ಆದ್ದರಿಂದ ನಟ ಸುದೀಪ್‌ ನಾಯಕತ್ವದ ಕರ್ನಾಟಕದ ತಂಡ ಮೂರನೇ ಬಾರಿಗೆ ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿಕೊಳ್ಳಬೇಕಾಯಿತು.

ಮೊದಲು ಬ್ಯಾಟ್‌ ಮಾಡಿದ ಬುಲ್ಡೋಜರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 207ರನ್‌ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ವಾರಿಯರ್ಸ್‌ 17.4 ಓವರ್‌ಗಳಲ್ಲಿ ಗುರಿ ಮುಟ್ಟಿತು.

ಪಂದ್ಯಶ್ರೇಷ್ಠ ಗೌರವ ಪಡೆದ ವಾರಿಯರ್ಸ್‌ ತಂಡದ ಸಚಿನ್‌ ಕೇವಲ 49 ಎಸೆತಗಳಲ್ಲಿ 114 ರನ್‌ ಬಾರಿಸಿದರು. ಟೂರ್ನಿಯಲ್ಲಿ ಒಟ್ಟು 219 ರನ್ ಗಳಿಸಿ ನಾಲ್ಕು ವಿಕೆಟ್‌ ಕಬಳಿಸಿದ ಬುಲ್ಡೋಜರ್ಸ್ ತಂಡದ ಧ್ರುವ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Write A Comment