ಕರ್ನಾಟಕ

ಕೊಪ್ಪದ ಹುತಾತ್ಮ: ಬೆಟದೂರಿನಲ್ಲಿ ಶೋಕ ಸಾಗರ

Pinterest LinkedIn Tumblr

j1kಧಾರವಾಡ: ವೀರಮರಣ ಅಪ್ಪಿದ ಕನ್ನಡಿಗ ಯೋಧ ಹನುಮಂತಪ್ಪ ಕೊಪ್ಪದ ಅವರ ಸ್ವಗ್ರಾಮ ಬೆಟದೂರ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಕೊಪ್ಪದ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೆಟದೂರಿನ ಗ್ರಾಮಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮ ಕಣ್ಣೀರ ಸಾಗರದಲ್ಲಿ ಮುಳುಗಿದೆ.

ಶಾಲಾ ಮಕ್ಕಳು ಕೊಪ್ಪದ ಅವರ ಮನೆಯಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಹುತಾತ್ಮ ಕೊಪ್ಪದ ಅವರಿಗೆ ಗೌರವ ನಮನ ಸಲ್ಲಿಸಿದರು.

ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಕಚೇರಿಯ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಕೊಪ್ಪದ ಅವರಿಗೆ ಗೌರವ ಸಮರ್ಪಿಸಿದರು.

ಇಂದು ಸಂಜೆ ಹುಬ್ಬಳ್ಳಿಯಲ್ಲಿ ಕೊಪ್ಪದ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Write A Comment