ಕರ್ನಾಟಕ

ಕಂಟೇನರ್​ನಲ್ಲಿ ಸಾಗಿಸುತ್ತಿದ್ದ 16.5 ಕೆ.ಜಿ. ಅಫೀಮು ವಶ

Pinterest LinkedIn Tumblr

contenar111

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿ ವಿಜಯಪುರ ಈಗ ಮಾದಕ ದ್ರವ್ಯ ಸಾಗಾಣಿಕೆ ಜಾಲದ ಕೇಂದ್ರವಾಗá-ತ್ತಿದೆಯೇ ಎಂಬ ಅನá-ಮಾನ ದಟ್ಟವಾಗá-ತ್ತಿದೆ. ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ಅಬಕಾರಿ ಪೊಲೀಸರು 6 ಲಕ್ಷ ರೂ. ಮೌಲ್ಯದ 16.5 ಕೆ.ಜಿ. ಅಫೀಮನ್ನು ವಶಪಡಿಸಿಕೊಂಡಿದ್ದಾರೆ.

ಬೈಕ್​ಗಳನ್ನು ಸಾಗಿಸá-ವ ಕಂಟೇನರ್​ನಲ್ಲಿ ಮಾದಕ ದ್ರವ್ಯ ಸಾಗಿಸಲಾಗá-ತ್ತಿದೆ ಎಂಬ ಖಚಿತ ಸá-ಳಿವು ದೊರತ ಹಿನ್ನೆಲೆಯಲ್ಲಿ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಕಂಟೇನರ್​ನಲ್ಲಿದ್ದ 500 ಗ್ರಾಂ ತೂಕದ 33 ಅಫೀಮು ಪ್ಯಾಕೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಂಟೇನರ್ ಚಾಲಕ ಹರಿಯಾಣ ಮೂಲದ ಕಿಶನ್​ಸಿಂಗ್ ಬದನ್​ಸಿಂಗ್ ಯಾದವ್ ಎಂಬಾತನನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಸಿಕ್ಕಿತ್ತು: ಗುರ್​ಗಾಂವ್​ನಿಂದ ಮಧುರೈಗೆ ಬೈಕ್ ಸಾಗಿಸá-ತ್ತಿದ್ದ ಕಂಟೇನರ್​ನಲ್ಲಿ ಅಫೀಮು ಕಳ್ಳಸಾಗಣೆ ಮಾಡಲಾಗá-ತ್ತಿದೆ ಎಂಬ ಮಾಹಿತಿ ಅಬಕಾರಿ ಪೊಲೀಸರಿಗೆ ಲಭ್ಯವಾಗಿತ್ತು. ಅಬಕಾರಿ ಸಿಪಿಐ ಎ.ಎ. ಮುಜಾವರ, ಉಪ ಅಧೀಕ್ಷಕ ಜಗದೀಶ ಇನಾಮದಾರ ಅವರ ತಂಡ ಜಾಗೃತರಾಗಿ ಇಂಡಿ ತಾಲೂಕಿನ ಹಲಸಂಗಿ ಕ್ರಾಸ್ ಬಳಿ ನಿಂತಿತ್ತು. ಕಂಟೇನರ್ ತಡೆದು ಪರಿಶೀಲನೆ ನಡೆಸಿದಾಗ ಬೈಕ್​ಗಳ ನಡá-ವೆ ಅಫೀಮು ಪ್ಯಾಕೆಟ್​ಗಳನ್ನು ಇಟ್ಟಿರá-ವುದು ಕಂಡá-ಬಂತು.

ಅಡ್ಡೆಗಳಿಗೆ ರವಾನೆ: ಅಫೀಮನ್ನು ಮಧ್ಯಪ್ರದೇಶದಿಂದ ತರಲಾ ಗಿದ್ದು, ವಿಜಯಪುರ ಹಾಗೂ ತುಮಕೂರು ಮಾರ್ಗ ಮಧ್ಯೆ ಇರá-ವ ಅಡ್ಡೆಗಳಿಗೆ ಸಾಗಿಸಲಾಗá-ತ್ತಿತ್ತು. ಬೇಡಿಕೆಗೆ ಅನá-ಗá-ಣವಾಗಿ ಈ ಪ್ರದೇಶದ ಅಡ್ಡೆಗಳಿಗೆ ಅಫೀಮ ಸರಬರಾಜು ಮಾಡá-ವುದಾಗಿ ಕಂಟೇನರ್ ಚಾಲಕ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗá-ತ್ತಿದೆ ಎಂದು ಅಬಕಾರಿ ಸಿಪಿಐ ಎ.ಎ. ಮುಜಾವರ ತಿಳಿಸಿದ್ದಾರೆ. ವಿಜಯಪುರ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು, 52 ಬೈಕ್​ಗಳಿದ್ದ ಕಂಟೇನರ್ ವಶಕ್ಕೆ ಪಡೆಯಲಾಗಿದೆ.

ಕಳೆದ ವರ್ಷವೂ ನಡೆದಿತ್ತು : ಕಳೆದ ವರ್ಷ ಒಟ್ಟು 1.14 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. 46.30 ಲಕ್ಷ ರೂ. ಮೌಲ್ಯದ ಗಾಂಜಾ, 12 ಲಕ್ಷ ರೂ. ಮೌಲ್ಯದ ಒಪಿಎಂ ಕಚ್ಚಾ ಪದಾರ್ಥ, 19 ಲಕ್ಷ ರೂ. ಮೌಲ್ಯದ ಶುದ್ಧ ಒಪಿಎಂ ಪೌಡರನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದರು.

ಸಾಗಣೆ ಹೇಗೆ?

ಸೊಲ್ಲಾಪುರ-ವಿಜಯಪುರ ಹೆದ್ದಾರಿ ಇತರ ರಾಜ್ಯದೊಂದಿಗೆ ಕರ್ನಾಟಕವನ್ನು ಸಂರ್ಪಸá-ತ್ತದೆ. ವಿಜಯಪುರ ಸೇರಿ ಹಲವು ಜಿಲ್ಲೆಗಳ ಮೂಲಕ ಇದು ಹಾದá-ಹೋಗá-ತ್ತದೆ. ಇಲ್ಲಿನ ಒಳಮಾರ್ಗಗಳು ಮಾದಕ ದ್ರವ್ಯ ಸಾಗಾಟಕ್ಕೆ ಅನುಕೂಲಕರವಾಗಿವೆ. ಕಾರು, ಬೈಕ್ ತುಂಬಿಕೊಂಡು ಬರುವ ಕಂಟೇನರ್​ಗಳು, ಬೃಹತ್ ಲಾರಿಗಳಲ್ಲಿ ಮಾದಕ ದ್ರವ್ಯವನ್ನು ನಿರಂತರವಾಗಿ ಸಾಗಿಸಲಾಗá-ತ್ತಿದೆ. ಐತಿಹಾಸಿಕ ತಾಣಗಳಾದ ಹಂಪಿ, ಬಾದಾಮಿ ಹಾಗೂ ಪ್ರವಾಸಿ ತಾಣ ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೂ ಇದು ರವಾನೆಯಾಗುತ್ತದೆ. ಸೊಲ್ಲಾಪುರದ ತೇರಾಮೈಲ್​ನಿಂದ ವಿಜಯಪುರ, ಆಲಮಟ್ಟಿ, ಚಿತ್ರದುರ್ಗದವರೆಗೆ ಮಾದಕ ಪದಾರ್ಥ ಮಾರಾಟಗಾರರ ಜಾಲ ವ್ಯಾಪಕವಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳುತ್ತಿವೆ.

Write A Comment