ಮಂಗಳೂರು,ಫೆ.09 :ಮಂಗಳೂರಿನ ಸ್ಕೇಟಿಂಗ್ ಪಟುಗಳು ದೇಶದ ಭೂಪಟದಲ್ಲಿ ಮಂಗಳೂರನ್ನು ಗುರುತಿಸಿಕೊಳ್ಳುವಂತಹ ಸಾಧನೆಯನ್ನು ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಉತ್ತಮ ಸ್ಕೇಟಿಂಗ್ ಪಟುಗಳು ಬೆಳೆಯುವಲ್ಲಿ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ಹಾಗೂ ಕಬ್ಲ್‌ನ ತರಬೇತುದಾರ ಮಹೇಶ್‌ಕುಮಾರ್ ಶ್ರಮ ಉಲ್ಲೇಖನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಶ್ಲಾಘಿಸಿದರು.
ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ 25 ನೇ ವರ್ಷಾಚರಣೆ ಸಂದರ್ಭ ನಗರದ ಕದ್ರಿ ಪಾರ್ಕ್ ಬಳಿಯ ಸ್ಕೇಟಿಂಗ್ ರಿಂಕ್‌ನಲ್ಲಿ ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14ನೇ ಅಂತರ್‌ಶಾಲಾ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಕೇಟಿಂಗ್‌ನಲ್ಲಿ ದೇಶ ಮತ್ತು ಪ್ರಪಂಚದಾದ್ಯಂತ ಮಂಗಳೂರಿನ ಪ್ರತಿಭೆಗಳು ಬೆಳೆಯುವ ನಿಟ್ಟಿನಲ್ಲಿ ಶ್ರಮಿಸಿದ ಈ ಕ್ಲಬ್, ಕಷ್ಟ-ಸುಖದೊಂದಿಗೆ 25 ವರ್ಷಗಳನ್ನು ಪೂರೈಸಿರುವುದು ಸಂತಸದ ವಿಚಾರ ಈ ಕ್ಲಬ್‌ನ ಮೂಲಕ ಇನ್ನಷ್ಟು ಪ್ರತಿಭೆಗಳು ಬೆಳೆಯುವಲ್ಲಿ ಎಂದು ಅವರು ಹಾರೈಸಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ಥಳಕ್ಕೆ ಭೇಟಿ ನೀಡಿ ಸ್ಪರ್ಧೆಯನ್ನು ವೀಕ್ಷಿಸಿ ಶುಭ ಹಾರೈಸಿದರು. ಕ್ಲಬ್‌ನ ಅಧ್ಯಕ್ಷ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಶ್ರೀಲತಾ ಅಡ್ಡೂರು ಕಾರ್ಯಕ್ರಮ ನಿರ್ವಹಿಸಿದರು.
ರೋಹನ್ ಕಾರ್ಪೊರೇಶನಿನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ, ಸ್ಕೇಟಿಂಗ್‌ನ ರಾಷ್ಟ್ರೀಯ ತೀರ್ಪುಗಾರ ಆಂಟನಿ ಜೇಮ್ಸ್, ಪಾಲಿಕೆಯ ಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು,ಪಾಲಿಕೆ ಸದಸ್ಯರಾದ ಆಶಾ ಡಿಸಿಲ್ವ,ವಿಜಯ ಕುಮಾರ್‌ಶೆಟ್ಟಿ,ಉದ್ಯಮಿಗಳಾದ ಆಲ್ವಿನ್ ಡಿಸಿಲ್ವ,ನಿಶಾಂತ್ ಶೇಟ್,ಮೆಸ್ಕಾಂನ ಉಮೇಶ್ ಕುಮಾರ್,ಮುಖ್ಯ ಅತಿಥಿಗಳಾಗಿದ್ದರು. ಸ್ಕೇಟಿಂಗ್ ಕ್ಲಬ್‌ನ ಅಧ್ಯಕ್ಷ ಪ್ರವೀಣ್ ಕುಮಾರ್, ತರಬೇತುದಾರ ಮಹೇಶ್ ಕುಮಾರ್ ಉಪಸ್ಥಿತರಿದ್ದರು
ಬೆಳಗ್ಗೆ ಪಣಂಬೂರಿನಲ್ಲಿ ಜರುಗಿದ ರೋಡ್ ರೇಸ್ ಸ್ಪರ್ಧೆಯನ್ನು ಡಿಸಿಪಿ ಸಂಜೀವ್ ಪಾಟೀಲ್ ಉದ್ಘಾಟಿಸಿದರು.
ರೋಡ್ ರೇಸ್ ಹಾಗೂ ರಿಂಕ್‌ರೇಸ್‌ನಲ್ಲಿ ಆರು ವರ್ಷದ ಕೆಳಗಿನವರಿಂದ 10 ನೇ ತರಗತಿಯವರೆಗಿನ ವಯಸ್ಸಿಗನುಗುಣವಾಗಿ 6 ವಿಭಾಗಗಳಲ್ಲಿ ಬಾಲಕರು ಮತ್ತು ಬಾಲಕಿಯರ ಸ್ಪರ್ಧೆ ನಡೆಯಿತು.
14 ನೇ ಅಂತರ್ ಶಾಲಾ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನ ಚಾಂಪಿಯನ್ ಸ್ಥಾನವನ್ನು ಮಂಗಳೂರಿನ ಕೆನರಾ ಹೆಸ್ಕೂಲ್ ಡೊಂಗರಕೇರಿ ಗೆದ್ದುಕೊಂಡಿದೆ.
ನಗರದ ಶಾರದಾ ವಿದ್ಯಾಲಯ ದ್ವಿತೀಯ ಹಾಗೂ ಕೇಂಬ್ರಿಜ್ ಶಾಲೆ ನೀರುಮಾರ್ಗ ತೃತೀಯ ಸ್ಥಾನಗಳನ್ನು ಗಳಿಸಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಸಾನಿಧ್ಯ ವಿಶೇಷ ಶಾಲೆಯ ಭಿನ್ನ ಸಾಮರ್ಥ್ಯದ ಮಕ್ಕಳು ಸ್ಕೇಟಿಂಗ್ ಪ್ರದರ್ಶನ ನಡೆಸುವ ಮೂಲಕ ಎಲ್ಲರ ಮನಸೂರೆಗೊಂಡರು.