ಕರ್ನಾಟಕ

ವಿಜಯಪುರ ಕಾಲೇಜಲ್ಲಿ ರಮ್ಯಾ ಡ್ಯಾನ್ಸ್‌

Pinterest LinkedIn Tumblr

ramya-images-0117ವಿಜಯಪುರ: ಸಿನೆಮಾದಲ್ಲಿ ನಾಯಕಿಯಾಗುವುದು ಸುಲಭದ ಕೆಲಸವಲ್ಲ. ಅದರಷ್ಟು ಕಷ್ಟದ ಕೆಲಸ ಇನ್ನೊಂದಿಲ್ಲ ಎಂದು ಸ್ಯಾಂಡಲ್‌ವುಡ್‌ ತಾರೆ, ಮಾಜಿ ಸಂಸದೆ ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.

ನಗರದ ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ವಾರ್ಷಿಕ ಸ್ನೇಹ ಸಮ್ಮೇಳನ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ರಮ್ಯಾ, ಕಾರ್ಯಕ್ರಮದಲ್ಲಿ ತಾವು ನಟಿಸಿದ ಕನ್ನಡ ಚಿತ್ರಗೀತೆಗಳಿಗೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿ ವಿದ್ಯಾರ್ಥಿಗಳನ್ನು ರಂಜಿಸಿದರು.

ತಮ್ಮ ನಟನೆಯ ಜಾಜಿ ಮಲ್ಲಿಗೆ, ಮುಸ್ಸಂಜೆ ಮಾತು ಚಿತ್ರದ ಆಹಾ ಒಂಥರ, ಸೇವಂತಿ ಸೇವಂತಿ ಚಿತ್ರದ ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ, ಗೌರಮ್ಮ ಚಿತ್ರದ ಕೊಲ್ಲತ್ತಾಳಲ್ಲಪೋ ಕಣ್ಣಿನಲ್ಲೇ ಕೊಲ್ಲತ್ತಳಲ್ಲಪೋ ಗೀತೆಗೆ ನೃತ್ಯ ಮಾಡಿದರು. ನೆರೆದಿದ್ದ ವಿದ್ಯಾರ್ಥಿಗಳು ಕರತಾಡನದ ಮೂಲಕ ಸ್ಫೂಧಿರ್ತಿ ತುಂಬಿದರು.

ಬಳಿಕ ತಮ್ಮ ಚಿತ್ರರಂಗದ ಅನುಭವಗಳನ್ನು ಹಂಚಿಕೊಂಡ ಅವರು, ಚಿತ್ರರಂಗದಲ್ಲಿ ನಾಯಕಿಯಾಗಿ ಬೆಳೆಯುವುದು ಈಗಲೂ ಕಷ್ಟದ ಕೆಲಸ. ಆದರೆ, ಇತ್ತೀಚಿನ ದಿನಗಳಲ್ಲಿ ಗಾಂಧಿನಗರದಲ್ಲಿ ಮಹಿಳೆಯರಿಗೆ ಪೂರಕ ಪರಿಸರ ನಿರ್ಮಾಣವಾಗುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದರು.
ವಿಜಯಪುರದ ಜನರ ಪ್ರೀತಿ, ವಿಶ್ವಾಸ, ಜೀವನದ ಶಿಸ್ತು, ಪರಸ್ಪರ ಗೌರವಿಸುವ ಗುಣಗಳು ತುಂಬಾ ವಿಶೇಷವಾಗಿವೆ. ಕಳೆದ ಹಲವು ವರ್ಷಗಳಿಂದ ಡಾ| ಎಂ.ಬಿ.ಪಾಟೀಲ ಹಾಗೂ ಅವರ ಪತ್ನಿ ಆಶಾ ಪಾಟೀಲ ಅವರೊಂದಿಗೆ ಉತ್ತಮ ಬಾಂಧವ್ಯವಿದೆ ಎಂದರು. ಇದೇ ವೇಳೆ, ಬಿ.ಎಂ.ಪಾಟೀಲ ಫೌಂಡೇಶನ್‌ನಿಂದ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾದ ಲ್ಯಾಪ್‌ಟಾಪ್‌ನ್ನು ರಮ್ಯಾ ವಿತರಿಸಿದರು.
-ಉದಯವಾಣಿ

Write A Comment