ಕರ್ನಾಟಕ

ಬ್ರೆಶ್‌ನಿಂದ ಹಳ್ಳುಜ್ಜಿಕೊಳ್ಳುತ್ತೆ ಈ ಮಂಗ..!

Pinterest LinkedIn Tumblr

mangaತುಮಕೂರು,ಜ.28-ಮಂಗನಿಂದ ಮಾನವ ಅಂತಾರೇ..  ಮನುಷ್ಯನಿಗಿಂತ ನಾವೇನು ಕಡಿಮೆ ಇಲ್ಲ ಎಂಬಂತೆ ವಾನರವೊಂದು ಸುಮಾರು ಒಂದುಗಂಟೆಗಳ ಕಾಲ ಬ್ರೆಶ್‌ನಿಂದ ಹಲ್ಲು ಹುಜ್ಜಿಕೊಳ್ಳುವುದರ ಮೂಲಕ ಗಮನ ಸೆಳೆದಿದೆ. ನಗರದ ಬಿ.ಹೆಚ್.ರಸ್ತೆಯ ನಿಮ್ರಾ ಕಾಂಪ್ಲೆಕ್ಸ್ ಕಟ್ಟಡದ ಮೇಲೆ ಇರವ ಬಾತ್‌ರೂಮ್‌ನಲ್ಲಿ ಇರುವ ಬ್ರೆಶ್‌ನ್ನು ತೆಗೆದುಕೊಂಡು ಸುಮಾರು ಒಂದು ಗಂಟೆಗಳ ಕಾಲ ಹಲ್ಲನ್ನು ಹುಜ್ಜಿಕ್ಕೊಳ್ಳುತಿತ್ತು. ಈ ದೃಶ್ಯವನ್ನು ವಿದ್ಯಾರ್ಥಿ ವರುಣ್ ಮೂಖ ಪ್ರೇಕ್ಷಕನಂತೆ ನೋಡುತ್ತಿದ್ದು, ಯಾರೇ ನೋಡಲಿ ನಾನು ಮೊದಲು ನನ್ನ ಹಲ್ಲನ್ನು ಹುಜ್ಜಿಕೊಳ್ಳುತ್ತೇನೆ.

ಆಮೇಲೆ ನೀನು ಸ್ನಾನಕ್ಕೆ ಹೋಗುವಂತೆ ವಾನರ ತನ್ನದೆ ಭಾಷೆಯಲ್ಲಿ ವಿದ್ಯಾರ್ಥಿಗೆ ಸೂಚಿಸಿದಂತಿತ್ತು. ಇದರಿಂದಲೆ ತಿಳಿಯುತ್ತದೆ ಮಾನವರಷ್ಟೆ ಪ್ರಾಣಿಗಳೂ ಸಹ ತಮ್ಮ ನಿತ್ಯ ಕರ್ಮಗಳನ್ನು ಮಾಡಿಕೊಳ್ಳುತ್ತವೆ ಎಂಬುದಕ್ಕೆ ಈ ದೃಶ್ಯ ಪ್ರತ್ಯಕ್ಷ ಸಾಕ್ಷಿಯಾಗಿದೆ.

Write A Comment