ಬೆಂಗಳೂರು, ಜ.19- ಬಿಇ ವ್ಯಾಸಂಗ ಮಾಡುತ್ತಿದ್ದ ಸೋದರಿಯರಿಬ್ಬರು ಒಂದೇ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿಯ ಹೊಂಗಸಂದ್ರದ ಲಕ್ಷ್ಮಿಲೇಔಟ್ ನಿವಾಸಿ ಮಲ್ಲೇಶ್ ಎಂಬುವರ ಮಕ್ಕಳಾದ ಮತ್ತು ತೇಜಸ್ವಿನಿ(24) ಆತ್ಮಹತ್ಯೆ ಮಾಡಿಕೊಂಡ ಸೋದರಿಯರು.
ತೇಜಸ್ವಿನಿ ಅಂತಿಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದರೆ, ರಂಜಿತ 2ನೆ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಆದರೆ ನಾವು ಓದು ಮುಗಿಯುವವರೆಗೂ ವಿವಾಹ ಬೇಡ ಎಂದು ಹಿರಿಯ ಮಗಳು ಹೇಳಿದ್ದಳು.
ದ್ವಿತೀಯ ಪುತ್ರಿ ಕೂಡ ಇದೆ ಇರಾದೆ ತಳೆದಿದ್ದಳು. ಇದು ಕುಟುಂಬದಲ್ಲಿ ಸಣ್ಣ ಮಸ್ತಾಪ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸೋದರಿಯರಿಬ್ಬರು ಒಂದೇ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅಪ್ಪ- ಅಮ್ಮನ ತಪ್ಪಿಲ್ಲ ಎಂದು ಪತ್ರ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.